ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ವಷರ್ಂಪ್ರತಿ ನಡೆಯುವ ಧನುಮಾಸದ ಮಂಡಲಪೂಜಾ ಮಹೋತ್ಸವ ಜ. 2 ರಂದು ಬೆಳಗ್ಗೆ ವೈದಿಕ ಪ್ರಮುಖರಿಂದ ಶ್ರೀ ರುದ್ರಪಾರಾಯಣ, ಶತರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆಯೊಂದಿಗೆ ನಡೆಯಿತು.
ಕರೋನಾ ಸಂಕಷ್ಟದ ಹಿನ್ನಲೆಯಲ್ಲಿ ಕಠಿಣ ನಿಯಂತ್ರಣಗಳಿರುವುದರಿಂದ ಅತ್ಯಂತ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ನೂತನ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿ ಆಯ್ಕೆಯಾದ ಶೈಲಜಾ ಭಟ್ ಹಾಗೂ ಬ್ಲಾಕ್ ಪಂಚಾಯತಿ ಸದಸ್ಯೆಯಾಗಿ ಆಯ್ಕೆಯಾದ ಅಶ್ವಿನಿ ಭಟ್ ಆಗಮಿಸಿದ್ದರು. ಕ್ಷೇತ್ರ ಮುಂಭಾಗದಲ್ಲಿ ಹರಿಯುತ್ತಿರುವ ಪೆರಡಾಲ ಹೊಳೆಗೆ ಸೇತುವೆ ಇಲ್ಲದೆ, ಹಲವಾರು ವರ್ಷಗಳಿಂದ ಕಷ್ಟ ಪಡುತ್ತಿರುವ ಇಲ್ಲಿನ ಹೊಳೆಯ ಇಕ್ಕೆಲದ ಕೃಷಿಕರ, ಕೂಲಿಕಾರ್ಮಿಕರ, ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಯಾದ ಶಾಶ್ವತ ಸೇತುವೆಯೊಂದನ್ನು ಸರ್ಕಾರದ ವತಿಯಿಂದ ನಿರ್ಮಿಸುವಂತೆ ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಶೈಲಜಾ ಭಟ್ ಹಾಗೂ ಅಶ್ವಿನಿ ಭಟ್ ಇವರನ್ನು ಕ್ಷೇತ್ರದ ವತಿಯಿಂದ ಶಾಲು ಹೊದೆಸಿ ಗೌರವಿಸಲಾಯಿತು.