ತಿರುವನಂತಪುರ: ಮಲಬಾರ್ ಎಕ್ಸ್‍ಪ್ರೆಸ್ ರೈಲಿನ ಲಗೇಜ್ ವ್ಯಾಗನ್ ನಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡ ಸಂಬಂಧಿಸಿದಂತೆ ಕಾಸರಗೋಡು ನಿಲ್ದಾಣದ ಪಾರ್ಸೆಲ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಬೈಕು ಲೋಡ್ ಮಾಡುವ ಉಸ್ತುವಾರಿ ಪಾರ್ಸೆಲ್ ಗುಮಾಸ್ತನನ್ನು ಕರ್ತವ್ಯ ಲೋಪದ ಕಾರಣ ಅಮಾನತುಗೊಳಿಸಲಾಗಿದೆ. ಪಾಲಕ್ಕಾಡ್ ವಿಭಾಗದಿಂದ ಅಮಾನತುಗೊಳಿಸಲಾಗಿದೆ.
ಭಾನುವಾರ ಬೆಳಿಗ್ಗೆ 7.45ಕ್ಕೆ ವರ್ಕಲಾ ಬಳಿಯ ಇಡವ ರೈಲು ನಿಲ್ದಾಣದ ಬಳಿ ಮಲಬಾರ್ ಎಕ್ಸ್‍ಪ್ರೆಸ್ ನ ಲಗೇಜ್ ವ್ಯಾನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಪ್ರಯಾಣಿಕರು ಬೆಂಕಿಯನ್ನು ಗಮನಿಸಿ, ಸರಪಣಿಯನ್ನು ಎಳೆದು, ರೈಲು ನಿಲ್ಲಿಸಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಭಾರೀ ವೇಗವಾಗಿ ಬೆಂಕಿ ಹತ್ತಿಕೊಂಡ ಬೋಗಿಯನ್ನು ಇತರ ಬೋಗಿಗಳಿಂದ ಬೇರ್ಪಡಿಸಲಾಯಿತು. ಅರ್ಧ ಘಂಟೆಯೊಳಗೆ ಬೆಂಕಿ ನಂದಿಸಲಾಯಿತು.
ಸಮಗ್ರ ವರದಿ:
ಮಂಗಳೂರು-ತಿರುವನಂತಪುರಂ ಮಲಬಾರ್ ಎಕ್ಸ್‍ಪ್ರೆಸ್ ರೈಲಿನ ಪಾರ್ಸೆಲ್ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಆಕಸ್ಮಿಕವಾಗಿ ಬೆಂಕಿ ಹತ್ತಿದೆ ಎಂದು ತಿಳಿಯಲಾಗಿದೆ. ರೈಲಿನ ಎಂಜಿನ್‍ನ ಹಿಂದಿನ ಪಾರ್ಸೆಲ್ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತು.
ಹೊಗೆ ಕಂಡುಬರುತ್ತಿರುವುದನ್ನು ಗಮನಿಸಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ಅಗ್ನಿಶಾಮಕ ಸಾಧನಗಳ ಸಹಾಯದಿಂದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ತರುವಾಯ, ಸೆಕೆಂಡುಗಳಲ್ಲಿ ಬೆಂಕಿ ನಿಯಂತ್ರಣದಲ್ಲಿದೆ ಎಂದು ವರದಿಯಾಗಿದೆ.
ಪ್ರಯಾಣಿಕರು ಸರಪಣಿಯನ್ನು ಎಳೆದು ಮಾಹಿತಿ ನೀಡಿದ್ದರಿಂದ ದೊಡ್ಡ ಅನಾಹುತ ಸಂಭವಿಸುವುದು ತಪ್ಪಿದೆ ಎನ್ನಲಾಗಿದೆ. ತಿರುವನಂತಪುರ-ಕೊಲ್ಲಂ ಗಡಿಯಲ್ಲಿರುವ ವರ್ಕಲಾ ನಿಲ್ದಾಣದಲ್ಲಿ ರೈಲು ನಿಲ್ಲಿಸಲಾಯಿತು.
ಒಂದು ದೊಡ್ಡ ದುರಂತವನ್ನು ಇಲ್ಲಿ ತಪ್ಪಿಸಲಾಯಿತು. ಪಾರ್ಸೆಲ್ ಬೋಗಿಯ ಪಕ್ಕದಲ್ಲಿ ಪ್ರಯಾಣಿಕರ ಬೋಗಿ ಇದ್ದು ಆದಾಗ್ಯೂ, ಬೆಂಣಕಿಯಿಂದೆದ್ದ ಧೂಮದಿಂದ ಯಾರಿಗೂ ಯಾವುದೇ ತೊಂದರೆಗಳಿಲ್ಲ ಎಂದು ರೈಲ್ವೇ ಇಲಾಖೆ ತಿಳಿಸಿದೆ.
ಬೆಂಕಿಯ ಕಾರಣವನ್ನು ರೈಲ್ವೆ ತನಿಖೆ ನಡೆಸುತ್ತಿದೆ. ಶಾರ್ಟ್ ಸಕ್ರ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂಬುದು ಆರಂಭಿಕ ತನಿಖೆಯಿಂದ ವ್ಯಕ್ತವಾಗಿದೆ. ಘಟನೆಯಲ್ಲಿ
ಎರಡು ಬೈಕ್ ಗಳು ಬೆಂಕಿಗಾಹುತಿಯಾಗಿದೆ. ಪಾರ್ಸೆಲ್ ಬೋಗಿಯಲ್ಲಿ ಮಾತ್ರ ಬೆಂಕಿ ಕಾಣಿಸಿಕೊಂಡಿದೆ ಮತ್ತು ಆರಂಭದಲ್ಲೇ ಗಮನಕ್ಕೆ ಬಂದಿದ್ದರಿಂದ ದೊಡ್ಡ ಅಪಘಾತವನ್ನು ತಪ್ಪಿಸಲಾಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಇಡವ ನಿಲ್ದಾಣದ ಮುಂದೆ ರೈಲಲ್ಲಿದ್ದ ಪ್ರಯಾಣಿಕರನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.