ಮಂಜೇಶ್ವರ: ಪುನರ್ನವೀಕರಣಗೊಂಡ ಮೀಯಪದವು ಅಯ್ಯಪ್ಪ ಭಜನಾ ಮಂದಿರದ ಪ್ರವೇಶ ಹಾಗೂ ಸ್ವರ್ಣಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾಮಹೋತ್ಸವವು ಫೆಬ್ರವರಿ 13ರರಿಂದ 16ರರವರೆಗೆ ಜರಗಲಿದ್ದು ಆ ಬಗೆಗಿನ ಆಮಂತ್ರಣಪತ್ರಿಕೆಯನ್ನು ಖ್ಯಾತ ಪಾಕತಜ್ಞ ಶ್ರೀಕೃಷ್ಣ ಹೊಳ್ಳ ಮೀಯಪದವು ಇತ್ತೀಚೆಗೆ ಅಯ್ಯಪ್ಪ ಭಜನಾಮಂದಿರ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.
ಪ್ರಸಿದ್ಧ ವೈದ್ಯ ಡಾ.ಬಾಲಸುಬ್ರಹ್ಮಣ್ಯ ಭಟ್ ಬರೆಮನೆ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಶ್ರೀ ಅಯ್ಯಪ್ಪ ಸೇವಾಸಂಘ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೀಧರ ರಾವ್ ಆರ್ ಎಂ, ಕಾಯಾಧ್ಯಕ್ಷ ಸುಬ್ಬಣ್ಣ ಆಳ್ವ ಬಾನಬೆಟ್ಟು, ಪ್ರಧಾನ ಕಾರ್ಯದರ್ಶಿ ಸದಾನಂದ ರೈ ಕಳ್ಳಿಗೆಬೀಡು, ಕಾರ್ಯದರ್ಶಿ ತಿಮ್ಮಪ್ಪ ಮೈತಾಳ್, ಮಂದಿರ ಗುರು ಸ್ವಾಮಿ ರಂಜಿತ್ ಕೋಡಿ, ವಿವಿಧ ಸಮಿತಿ ಪದಾಧಿಕಾರಿಗಳು, ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಾಜಾರಾಮ ರಾವ್ ಮೀಯಪದವು ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಟಿ.ಡಿ.ಸದಾಶಿವರಾವ್ ವಂದಿಸಿದರು.