ಕಾಸರಗೋಡು:ಕಾಸರಗೋಡಿನ ಚೆಮ್ನಾಡ್ ಮೂಲದ ವ್ಯೆಕ್ತಿಯೊಬ್ಬನನ್ನು ಕರಂದಕ್ಕಾಡ್ ನಲ್ಲಿ, ಜನರ ಗುಂಪೊಂದು ಥಳಿಸಿ ಕೊಲೆಗ್ಯೆದ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಚೆಮ್ಮನಾಡಿನ ರಫೀಕ್ (49) ಎಂದು ಗುರುತಿಸಲಾಗಿದೆ. ಘಟನೆ ಇಂದು ಮಧ್ಯಾಹ್ನ 1.45 ಕ್ಕೆ ಕರಂದಕ್ಕಾಡ್ ಅಶ್ವಿನಿನಗರದ ಖಾಸಗಿ ಆಸ್ಪತ್ರೆಯ ಬಳಿ ನಡೆದಿದೆ. ರಫೀಕ್‌ನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸುವ, ಮಧ್ಯೆ ಸಾವು ಸಂಭವಿಸಿದೆ.
ಘಟನೆ ಮಾಹಿತಿ ತಿಳಿದು ಕಾಸರಗೋಡು ಡಿವೈಎಸ್‌ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿತು. ಹತ್ತಿರದ ಅಂಗಡಿಗಳು ಮತ್ತು ಇತರ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದರು.