ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಬೆಂಗಳೂರಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು 2020 ನವಂಬರ್ ತಿಂಗಳಲ್ಲಿ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಜ್ಯೂನಿಯರ್ ಪರೀಕ್ಷೆಯಲ್ಲಿ ಜಿಲ್ಲೆಯ ಆದ್ಯಂತ್ ಅಡೂರು ಡಿಸ್ಟಿಂಕ್ಷನ್ ಗ್ರೇಡಿನಲ್ಲಿ ಉತ್ತೀರ್ಣನಾಗಿದ್ದಾನೆ. ಈತ ಅಡೂರಿನ ಸಂಗೀತ ಶಿಕ್ಷಕಿ ಶಾರದಾದೇವಿ ಬೈತನಡ್ಕ ಅವರ ಶಿಷ್ಯ. ಸಾಹಿತಿ, ಪತ್ರಕರ್ತ ವಿರಾಜ್ ಅಡೂರು-ಜಯಲಕ್ಷ್ಮಿ ದಂಪತಿಯ ಪುತ್ರ ಹಾಗೂ ಅಡೂರು ವಿದ್ಯಾಭಾರತಿ ವಿದ್ಯಾಲಯದ ಹಳೆವಿದ್ಯಾರ್ಥಿ. ಪ್ರಸ್ತುತ ಈಶ್ವರಮಂಗಲದ ಶ್ರೀ ಗಜಾನನ ಆಂಗ್ಲ ಮಾದ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.