ಆಲಪ್ಪುಳ: ಕೇಂದ್ರ ಸರ್ಕಾರ ಮಂಜೂರು ಮಾಡಿದ ದ್ವಿದಳ ಧಾನ್ಯಗಳನ್ನು ರಾಜ್ಯವು ಸ್ವ ಹಿತಾಸಕ್ತಿಗೆ ಬಳಸಿದೆ ಎಂದು ವರದಿಯಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಲಭಿಸಿದ ಕಡಲೆ ಮತ್ತು ಬಟಾಣಿಗಳನ್ನು ರಾಜ್ಯ ಸರ್ಕಾರ ತನ್ನದೆಂಬಂತೆ ವಿತರಿಸಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರವು ಪಡಿತರ ಚೀಟಿ ಹಂಚಿಕೆಯಲ್ಲಿ ರಾಜ್ಯ ಹಸ್ತಕ್ಷೇಪ ಮಾಡಿದೆ. ರಾಜ್ಯದ ಸುಮಾರು 38 ಲಕ್ಷ ಪಡಿತರದಾರರು ಕೇಂದ್ರದ ಉಚಿತ ದ್ವಿದಳ ಧಾನ್ಯಗಳಿಗೆ ಅರ್ಹರಾಗಿದ್ದಾರೆ. ದ್ವಿದಳ ಧಾನ್ಯಗಳು ಮತ್ತು ನೆಲಗಡಲೆಗಳನ್ನು ರಾಜ್ಯ ಸರ್ಕಾರವು ವಿತರಿಸುವ ಉಚಿತ ಆಹಾರ ಧಾನ್ಯಗಳ ಕಿಟ್ ನೊಂದಿಗೆ ವಿತರಿಸಿರುವುದಾಗಿ ದೃಢಪಡಿಸಲಾಗಿದೆ. ಇದರೊಂದಿಗೆ ಕೇಂದ್ರ ಯೋಜನೆಯ ವಿತರಣೆಯನ್ನು ಅನೇಕ ಸ್ಥಳಗಳಲ್ಲಿ ನಿಲ್ಲಿಸಲಾಯಿತು. ಹೆಚ್ಚಿನ ಪಡಿತರ ಚೀಟಿ ಹೊಂದಿರುವವರು ಇನ್ನೂ 2020 ರ ನವೆಂಬರ್‍ನಲ್ಲಿ ವಿತರಿಸಬೇಕಿದ್ದ ದ್ವಿದಳ ಧಾನ್ಯಗಳನ್ನು ಸ್ವೀಕರಿಸಿಲ್ಲ.
ಈ ಯೋಜನೆ ನವೆಂಬರ್ ವರೆಗೆ ನಡೆಯಿತು. ಬಟಾಣಿ ಮತ್ತು ಕಡಲೆ ಡಿಸೆಂಬರ್ ಅಂತ್ಯದ ವೇಳೆಗೆ ಪಡಿತರ ಅಂಗಡಿಗಳನ್ನು ತಲುಪಿತ್ತು ಎಂದು ವರದಿ ಹೇಳುತ್ತದೆ. ಸಪ್ಲೈಕೊ ಸರಬರಾಜುದಾರರು ನಿರೀಕ್ಷಿತ ಸಮಯದಲ್ಲಿ ಸರಕುಗಳನ್ನು ತಲುಪಿಸದ ಕಾರಣ ಕೇಂದ್ರದ ಆಹಾರ ಧಾನ್ಯಗಳನ್ನು ಕಿಟ್ ನೊಂದಿಗೆ ಸೇರಿಸಿ ವಿತರಿಸಲು ಕಾರಣ ಎನ್ನಲಾಗಿದೆ.
ಕೋವಿಡ್ ಅವಧಿಯಲ್ಲಿ, ಕೇಂದ್ರ ಸರ್ಕಾರವು ಎಎವೈ ಮತ್ತು ಆದ್ಯತೆಯ ಕಾರ್ಡ್ ಹೊಂದಿರುವವರಿಗೆ ದ್ವಿದಳ ಧಾನ್ಯಗಳನ್ನು ನೀಡಿತ್ತು. ಪ್ರತಿ ಕಾರ್ಡ್‍ಗೆ ತಿಂಗಳಿಗೆ ಒಂದು ಕೆಜಿ ಕಡಲೆ ಅಥವಾ ಬಟಾಣಿ ನೀಡುವ ಯೋಜನೆ ಇತ್ತು. ಕೇಂದ್ರವು ರಾಜ್ಯಕ್ಕೆ ಈಗಾಗಲೇ ಪ್ರತಿ ತಿಂಗಳ ಮುಂಗಡ ಆಹಾರ ಧಾನ್ಯಗಳನ್ನು ವಿತರಿಸಿದೆ. ಪಡಿತರ ಅಂಗಡಿಗಳ ಮೂಲಕ ವಿತರಣೆಗಾಗಿ ಇವುಗಳನ್ನು ನೇರವಾಗಿ ಸಪ್ಲೈಕೊಗೆ ಹಸ್ತಾಂತರಿಸಲಾಯಿತು. ಅದೇ ಸರಬರಾಜುದಾರರಿಂದ ರಾಜ್ಯ ಸರ್ಕಾರದ ಆಹಾರ ಧಾನ್ಯದ ಕಿಟ್ ತಯಾರಿಸಲಾಯಿತು.ಈ ವೇಳೆ ರಾಜ್ಯ ಸರ್ಕಾರ ಬೇಡಿಕೆ ಇರಿಸಿದ್ದ ಆಹಾರ ಧಾನ್ಯಗಳನ್ನು ಸಕಾಲಕ್ಕೆ ವಿತರಿಸಲಾಗದೆ ಸಪ್ಲೈ ಕೋ ಕೇಂದ್ರದ ಧಾನ್ಯಗಳನ್ನು ಬಳಸಿತು ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ್ಲ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ.