ಪೆರ್ಲ: ಜನರಲ್ಲಿ ಕೃಷಿಯಬಗ್ಗೆ ಆಸಕ್ತಿ ಮೂಡಿಸುವ ಯೋಜನೆಗಳನ್ನು ಜಾರಿಗೆ ತರಲು ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ಎಣ್ಮಕಜೆ ಗ್ರಾಪಂ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ತಿಳಿಸಿದ್ದಾರೆ.
ಅವರು ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ "ನಮ್ಮ ಅನ್ನದ ಬಟ್ಟಲಿಗೆ ನಮ್ಮ ಊರಿಂದೇ ತರಕಾರಿ' ಎಂಬ ಊರ ತರಕಾರಿ ಸಂತೆಗೆ ಗುರುವಾರ ಪೆರ್ಲ ಬ್ಯಾಂಕ್ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಬಂಜರು ಭೂಮಿಯಲ್ಲಿ ಭತ್ತದ ಕೃಷಿಯನ್ನು ಯಶಸ್ವಿಯಾಗಿ ನಡೆಸಿರುವ ಬ್ಯಾಂಕ್ ಊರ ತರಕಾರಿ ಸಂತೆ ಆಯೋಜಿಸುವ ಮೂಲಕ ಗ್ರಾಹಕರು ಮತ್ತು ಸಾರ್ವಜನಿಕರ ಆಶೋತ್ತರ ಈಡೇರಿಸುವ ಕೆಲಸ ನಡೆಸಿರುವುದು ಶ್ಲಾಘನೀಯ ಎಂದು ತಿಳಿಸಿದರು. ಮಂಜೇಶ್ವರ ಕೋ ಓಪರೇಟಿವ್ ಸಹಾಯಕ ನಿಬಂಧಕ ರಾಜಗೋಪಾಲ್ ಮೊದಲ ಗ್ರಾಹಕರಿಗೆ ತರಕಾರಿ ವಿತರಿಸಿದರು.
ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಶಶಿಭೂಷಣ್ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕ್ರಷಿಕ ಶಿವಪ್ರಸಾದ್ ವರ್ಮುಡಿ, ಕಸಿ ತಜ್ಞ, ಶಿಕ್ಷಕ ಉಮೇಶ್ ಕೆ.ಪೆರ್ಲ ಉಪಸ್ಥಿತರಿದ್ದರು. ಬ್ಯಾಂಕಿನ ಕಾರ್ಯದರ್ಶಿ ಪ್ರಭಾಕರ ಸ್ವಾಗತಿಸಿದರು. ಬ್ಯಾಂಕ್ ಉಪಾಧ್ಯಕ್ಷ ರಾಜಾರಾಮ ಬಾಳಿಗ ಪೆರ್ಲ ವಂದಿಸಿದರು. ಕೋವಿಡ್ ಮಾನದಂಡದ ಪಾಲನೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೆರ್ಲ ಸೇವಾಸಹಕಾರಿ ಬ್ಯಾಂಕ್ ವತಿಯಿಂದ ಆಯೋಜಿಸಲಾದ ಊರ ತರಕಾರಿ ಸಂತೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು.
ಕೋವಿಡ್ ಮಾನದಂಡ ನಿಮ್ಮ ವರದಿಯಲ್ಲಿ ಮಾತ್ರ ಇದೆ. ನೀವು ಪ್ರಕಟಿಸಿರುವ ಫೋಟೋದಲ್ಲಿ ಇಲ್ಲವೇ ಇಲ್ಲ. _ ಶ್ರೀ ಪಡ್ರೆ
ಪ್ರತ್ಯುತ್ತರಅಳಿಸಿ