ತ್ರಿಶೂರ್: ಪ್ರಸಿದ್ದ ತೀರ್ಥಾಟನಾ ಕ್ಷೇತ್ರವಾದ ಗುರುವಾಯೂರ್ ದೇವಸ್ಥಾನಕ್ಕೆ ಶುಕ್ರವಾರ ಬೆಳಿಗ್ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದ ಘಟನೆ ನಡೆದಿದೆ. ಗುರುವಾರ ರಾತ್ರಿ ದೇವಸ್ಥಾನದ ಪೋನ್ ಗೆ ಬೆದರಿಕೆ ಕರೆಯೊಂದು ಬಂದಿತ್ತು. ದೇವಾಲಯದ ಕಾವಲುಗಾರ ಸಂದೇಶವನ್ನು ಸ್ವೀಕರಿಸಿದ್ದು ಶುಕ್ರವಾರ ಬೆಳಿಗ್ಗೆ 5.30 ಕ್ಕೆ ಬಾಂಬ್ ಸ್ಫೋಟಿಸುವುದಾಗಿ ಮಾಹಿತಿ ನೀಡಲಾಗಿತ್ತು. ಕೂಡಲೇ ಗುರುವಾಯೂರ್ ದೇವಾಲಯ ಪೋಲೀಸ್ ಮತ್ತು ದೇವಸ್ವಂ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಪೋಲೀಸರು ಮತ್ತು ಅಧಿಕಾರಿಗಳು ತನಿಖೆ ನಡೆಸಿದರು. ಆದರೆ ಯಾವುದೇ ಸೂಚನೆಗಳೂ ಕಂಡುಬಾರದ ಹಿನ್ನೆಲೆಯಲ್ಲಿ ನಕಲಿ ಸಂದೇಶ ಎಂದು ಪೋಲೀಸರು ಖಾತ್ರಿಪಡಿಸಿರುವರು. ಪೋನ್ ನ ಮೂಲವನ್ನು ಸಿಐಸಿ ಪ್ರೇಮಾನಂದ ಕೃಷ್ಣನ್ ಮತ್ತು ತಂಡ ಪತ್ತೆಹಚ್ಚುವಲ್ಲಿ ನಿರತವಾಗಿದೆ.
ಮಹಿಳಾ ಮಾವೋವಾದಿ ನೇತಾರೆ ಗುರುವಾಯೂರಿಗೆ ಆಗಮಿಸಿರುವಳೆಂದು ಸಂದೇಶವೊಂದು ಗುರುವಾರ ಸಂಜೆ ಸ್ವೀಕರಿಸಲಾಗಿತ್ತು. ಬಳಿಕ ಗುರುವಾಯೂರ್ ಪೋಲೀಸರ ನೇತೃತ್ವದಲ್ಲಿ ಬಾಂಬ್ ಡಾಗ್ ಸ್ಕ್ಯಾಡ್ ನಗರ ಹಾಗೂ ಕ್ಷೇತ್ರ ಪರಿಸರದಲ್ಲಿ ಪರಿಶೀಲನೆ ನಡೆಸಿತ್ತು. ಇದರ ಬೆನ್ನಿಗೇ ರಾತ್ರಿ ವೇಳೆ ನಕಲಿ ಸಂದೇಶ ದೇವಾಲಯಕ್ಕೆ ಬಂದಿದೆ.
ನಂತರ ಸಂದೇಶವನ್ನು ದೇವಾಲಯಕ್ಕೆ 9 ರಂದು ತಲುಪಿಸಲಾಯಿತು. ಈಹಿಂದೆಯೂ ದೇವಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿದ್ದವು. ಆ ಬಳಿಕ ಅಂತಹ ಕರೆಮಾಡಿದವರನ್ನು ಪತ್ತೆಹಚ್ಚಲಾಗಿತ್ತು.