ಕಾಸರಗೋಡು: ಪಿ.ಎಂ.ಸ್ವಾನಿಧಿ- ಮೈ ಭೀ ಡಿಜಿಟಲ್ ಕಾಂಪೇನ್ ಅಂಗವಾಗಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಕಾಸರಗೊಡು ನಗರಸಭೆ ವ್ಯಾಪ್ತಿಯಲ್ಲಿ ಬೀದಿ ವ್ಯಾಪಾರಿಗಳಿಗೆ ಡಿಜಿಟಲ್ ವ್ಯವಹಾರ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ತರಬೇತಿ ನಿಡಲಾಯಿತು.
ಕಾಸರಗೋಡು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಉದ್ಘಾಟಿಸಿದರು. ಕಾರ್ಯದರ್ಶಿ ಜೆ.ಮುಹಮ್ಮದ್ ಶಾಫಿ ಅಧ್ಯಕ್ಷತೆ ವಹಿಸಿದ್ದರು. ಸಾಲ ನೀಡಿರುವ ಬಾಂಕ್ ಗಳ ಪ್ರತಿನಿಧಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ವ್ಯವಹಾರದಾರರು ಯು.ಪಿ.ಐ. ಐಡಿ ಬಳಸಿ ಕ್ಯೂ ಆರ್ ಕೋಡ್ ಸ್ಕಾನ್ ನಡೆಸಿ ಹಣದ ವ್ಯವಹಾರ ನಡೆಸಿದರು.
ಜಿಲ್ಲಾ ಲೀಡ್ ಬ್ಯಾಂಕ್ ಪ್ರಬಂಧಕ ಎನ್.ಕಣ್ಣನ್ ಪ್ರಧಾನ ಭಾಷಣ ಮಾಡಿದರು. ಎಫ್.ಎಲ್.ಸಿ. ಸದಸ್ಯರಾದ ದೇವದಾಸ್, ಸಾಲು ಸನ್ನಿ, ಬಾಲೇಂದರ್ ನಾಯರ್, ಸಿ.ಡಿ.ಎಸ್. ಅಧ್ಯಕ್ಷೆ ಸಾಹಿರಾ ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು. ಬೈಜು ಸಿ.ಎಂ.ಸ್ವಾಗತಿಸಿದರು. ಅರ್ಚನಾ ಕುಮಾರಿ ಎನ್.ಬಿ. ವಂದಿಸಿದರು.