HEALTH TIPS

ಕೋವಿಡ್ ಪ್ರತಿರೋಧದಲ್ಲಿ ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿಗಳು ನೇತೃತ್ವ ವಹಿಸಿ ರಂಗಕ್ಕಿಳಿಯಬೇಕು: ಜಿಲ್ಲಾಧಿಕಾರಿ

                 

       ಕಾಸರಗೋಡು: ಸ್ಥಳೀಯ ಮಟ್ಟದಲ್ಲಿ ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಪಂಚಾಯತ್-ನಗರಸಭೆ ಮಟ್ಟದ ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿಗಳು ನೇತೃತ್ವ ವಹಿಸಿ ರಂಗಕ್ಕಿಳಿಯಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. 

              ವೀಡಿಯೋ ಕಾನ್ ಫೆರೆನ್ಸ್ ಮೂಲಕ ಭಾನುವಾರ ನಡೆದ ಐ.ಇ.ಸಿ. ಕೋವಿಡ್ 19 ಜಿಲ್ಲಾ ಮಟ್ಟದ ಸಂಚಲನ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

          ಕೋವಿಡ್ ಪ್ರತಿರೋಧದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಪ್ರಬಲ ಭಾಗವಹಿಸುವಿಕೆ ಅನಿವಾರ್ಯ. ಮಾಸ್ಟರ್ ಯೋಜನೆಯ ಶಿಕ್ಷಕರು, ವೈದ್ಯಾಧಿಕಾರಿಗಳು, ಸೆಕ್ಟರಲ್ ಮೆಜಿಸ್ಟ್ರೇಟರರು ಮೊದಲಾದವರನ್ನು ಸೇರ್ಪಡೆಗೊಳಿಸಿ ಸ್ಥಳೀಯ ಮಟ್ಟದಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷರುಗಳು ನೇತೃತ್ವ ವಹಿಸಬೇಕು ಎಂದವರು ನುಡಿದರು. 

            ಪಂಚಾಯತ್ ಸದಸ್ಯರು ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳನ್ನು ಬಲಗೊಳಿಸಬೇಕು. ಇತರ ಜಿಲ್ಲೆಗಳಲ್ಲಿ ರೂಪಾಂತರಗೊಂಡ ಕೋವಿಡ್ ಸೋಂಕು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ಆಗಮಿಸಿದವರ ರೂಂ ಕ್ವಾರಂಟೈನ್ ಖಚಿತಪಡಿಸಬೇಕು. ವ್ಯಾಪಾರ ಸಂಸ್ಥೆಗಳಲ್ಲಿ ಮಾಸ್ಕ್, ಗ್ಲೌಸ್ ಧಾರಣೆ ಸಹಿತ ಕೋವಿಡ್ ಸಂಹಿತೆಗಳ ಕಡ್ಡಾಯ ಪಾಲನೆ ಮುಂದುವರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

       ಶಿಕ್ಷಣಾಲಯಗಳು ತೆರೆದಿರುವ ಹಿನ್ನೆಲೆಯಲ್ಲಿ ಮಾಸ್ಟರ್ ಯೋಜನೆಯಲ್ಲಿ ಹೆಚ್ಚುವರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸೇರ್ಪಡೆಗೊಳಿಸಲಾಗುವುದು. ಕೆಲವು ಟ್ಯೂಷನ್ ಸೆಂಟರ್ ಗಳಲ್ಲಿ ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸಲಾಗುತ್ತಿಲ್ಲ ಎಂಬ ವರದಿ ಲಭಿಸಿರುವ ಹಿನ್ನೆಲೆಯಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಕಳೆದ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೋವಿಡ್ ಪತ್ತೆಯಾಗಿದೆ. ಶಿಕ್ಷಣಾಲಯಗಳಲ್ಲಿ ಪಾಲಿಸಲಾಗುವ ಎಲ್ಲ ನಿಬಂಧನೆಗಳನ್ನೂ ಟ್ಯೂಷನ್ ಸೆಂಟರ್ ಗಳಲ್ಲಿ ಪಾಲಿಸಬೇಕು. ಆದೇಶ ಉಲ್ಲಂಘಿಸುವ ಟ್ಯೂಷನ್ ಸೆಂಟರ್ ಗಳನ್ನು ಮುಚ್ಚುಗಡೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. 

        ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಐ.ಇ.ಸಿ. ಸಂಚಲನ ಸಮಿತಿ ಸಂಚಾಲಕ, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್, ಡೆಪ್ಯೂಟಿ ಮಾಸ್ ಮೀಡಿಯಾ ಅಧಿಕಾರಿ ಸಯನಾ, ಮಾಸ್ಟರ್ ಯೋಜನೆಯ ಸಂ<ಚಾಲಕ ದಿಲೀಪ್ ಕುಮಾರ್, ಸಹಾಯಕ ಸಂಚಾಲಕರಾದ ವಿದ್ಯಾ ಪಿ.ಸಿ., ಕೆ.ಜಿ.ಮೋಹನನ್, ಕೇರಳ ಸಮಾಜ ಸುರಕ್ಷೆ ಮಿಷನ್ ಜಿಲ್ಲಾ ಸಮಿತಿ ಸಂಚಾಲಕ ಜಿಷೋ ಜೇಮ್ಸ್, ಶುಚಿತ್ವ ಮಿಷನ್ ಸಹಾಯಕ ಸಂಚಾಲಕ ಪ್ರೇಮರಾಜನ್, ಐ.ಸಿ.ಡಿ.ಎಸ್. ಪ್ರಧಾನ ಲೆಕ್ಕಾಧಿಕಾರಿ ರಜೀಷ್ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries