ಮುಳ್ಳೇರಿಯ : ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಮಾಸಿಕ ಸಭೆಯು ಈಚೆಗೆ ಅಡೂರಿನ ತಂಬಿನಡ್ಕ ರಾಜಾರಾಮ ಸರಳಾಯರ ಮನೆಯಲ್ಲಿ ನಡೆಯಿತು. ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮ ಭಾರಿತ್ತಾಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಶ್ರೀಪ್ರಕಾಶ ಎ, ಶ್ರೀಪ್ರಸಾದ ಎ, ಸತ್ಯನಾರಾಯಣ ಸರಳಾಯ, ಉಷಾರಾಣಿ ಎ ಕೆ, ಲತಾ ಆರ್ ಕೆ, ರಾಜಿತಾ ಕೆ ಆರ್, ಮಹಾದೇವ ಕಲ್ಲೂರಾಯ, ಲಕ್ಷ್ಮೀಶ ಕೇಕುಣ್ಣಾಯ, ಉದಯ ಕುಮಾರ್ ಮೊದಲಾದವರು ಭಾಗವಹಿಸಿದ್ದರು. ನಂದಿತಾ ಕೆ ಆರ್ ಪ್ರಾರ್ಥಿಸಿದರು. ರಾಜಾರಾಮ ಸರಳಾಯ ಸ್ವಾಗತಿಸಿ, ಪ್ರಶಾಂತ ರಾಜ ವಿ ತಂತ್ರಿ ವಂದಿಸಿದರು. ಕೇರಳ ಮಾಧ್ವ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಪ್ರತೀ ವರ್ಷದಂತೆ ವಿವಿಧ ವಿದ್ಯಾರ್ಥಿ ವೇತನಗಳನ್ನು ಘೋಷಿಸಲಾಗಿದ್ದು, ಸಮುದಾಯದ ಅರ್ಹ ಸದಸ್ಯ ಫಲಾನುಭವಿಗಳು ಅರ್ಜಿಗಳನ್ನು ಪಡೆದು, ಸೂಕ್ತ ದಾಖಲೆಗಳೊಂದಿಗೆ ಜ.30 ಮೊದಲು ಮುಳ್ಳೇರಿಯ ವಲಯ ಕಾರ್ಯದರ್ಶಿಯವರಿಗೆ ನೀಡಲು ಮನವಿ ಮಾಡಲಾಯಿತು. ಇದೇ ಜೂನ್ ತಿಂಗಳಲ್ಲಿ ಸಂಘmನೆಯ ವಾರ್ಷಿಕ ಮಹಾಸಭೆಯು ನಡೆಯಲಿದ್ದು, ಸದಸ್ಯತನ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಅಡೂರು ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಪ್ರತೀ ತಿಂಗಳ ಏಕಾದಶಿಯಂದು ನಡೆಯುತ್ತಿದ್ದ ವಿಷ್ಣು ಸಹಸ್ರನಾಮ ಪಾರಾಯಣವನ್ನು ಜನವರಿ 24ರಿಂದ ಪುನರಾರಂಭಿಸಲು ತೀರ್ಮಾನಿಸಲಾಯಿತು. ಅದೇ ರೀತಿ ಕಲ್ಲೇರಿಮೂಲೆ, ಬೆಳ್ಳೂರು ಹಾಗೂ ದೇಲಂಪಾಡಿ ಕ್ಷೇತ್ರದಲ್ಲೂ ಪ್ರಾದೇಶಿಕವಾಗಿ ವಾಸ್ತವ್ಯ ಇರುವ ಸಮುದಾಯದ ಸದಸ್ಯರು ಏಕಾದಶಿಯಂದು ವಿಷ್ಣು ಸಹಸ್ರನಾಮ ಪಾರಾಯಣ ಮುಂದುವರಿಸಲು ಮನವಿ ಮಾಡಲಾಯಿತು. ಸಂಘಟನೆಯ ಮುಂದಿನ ಸಭೆಯು ಮುಳ್ಳೇರಿಯ ಸಮೀಪದ ಆಲಂತಡ್ಕದ ಬಾಲಕೃಷ್ಣ ಕೇಕುಣ್ಣಾಯರ ಮನೆಯಲ್ಲಿ ಫೆಬ್ರವರಿ 14ರಂದು ಅಪರಾಹ್ನ 3ರಿಂದ ನಡೆಸಲು ತೀರ್ಮಾನಿಸಲಾಯಿತು. ವಿಷ್ಣು ಸಹಸ್ರನಾಮ ಪಾರಾಯಣದೊಂದಿಗೆ ಸಭೆ ಆರಂಭವಾಗಿತ್ತು.