ತಿರುವನಂತಪುರ: ಕುಟುಂಬ ಜಗಳ ತಾರಕಕ್ಕೇರಿ ಪತಿಯಿಂದ ಕೊಲೆಗೆಯ್ಯಲ್ಪಟ್ಟ ಕಾನತ್ತೂರಿನ ಘಟನೆಗೆ ಸಂಬಂಧಿಸಿ ಮಹಿಳಾ ಆಯೋಗ ಜಿಲ್ಲಾ ಪೋಲೀಸ್ ಮುಖ್ಯಸ್ಥರಿಂದ ವರದಿ ಕೋರಿದೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶಾಹಿದಾ ಕಮಲ್ ಈ ಬಗ್ಗೆ ಜಿಲ್ಲಾ ಪೋಲೀಸ್ ವರಿಷ್ಠರಿಂದ ಸಮಗ್ರ ವರದಿ ನೀಡುವಂತೆ ಆದೇಶ ನೀಡಿದೆ.
ಬಂದಡ್ಕ ಸಮೀಪದ ಕಾನತ್ತೂರಿನಲ್ಲಿ ಶನಿವಾರ ಮಧ್ಯಾಹ್ನ ಘಟನೆ ನಡೆದಿತ್ತು. ಬೇಬಿ ಬಿ (36) ಎಂಬವರು ಪತಿ ವಿಜಯನ್ ಅವರಿಂದ ಹತ್ಯೆಯಾಗಿದ್ದರು. ಬಳಿಕ ವಿಜಯನ್ ಸ್ವತಃ ಆತ್ಮಹತ್ಯೆಗೈದರು.
ವಿಜಯನ್ ತಮ್ಮಲ್ಲಿದ್ದ ಶಟ್ ಗನ್ ನಿಂದ ಪತ್ನಿಯ ತಲೆಗೆ ಗುಂಡು ಹಾರಿಸಿದ್ದು, ಬೇಬಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಶಬ್ದ ಕೇಳಿದ ನೆರೆಹೊರೆಯರು ಆದೂರು ಪೋಲೀಸರಿಗೆ ಮಾಹಿತಿ ನೀಡಿದ್ದು, ಪೋಲೀಸರು ಆಗಮಿಸಿ ಪಂಚನಾಮೆ ನಡೆಸಿ ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದು ಮಹಜರು ನಡೆಸಿದರು.