ನವದೆಹಲಿ: ಬಳಕೆದಾರರ ಸುರಕ್ಷತಾ ನೀತಿಗಳನ್ನು ಉಲ್ಲಂಘಿಸುವಂತಹ ವೈಯಕ್ತಿಕ ಸಾಲ ನೀಡುವ ಮೊಬೈಲ್ ಅಪ್ಲಿಕೇಷನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕುವುದಾಗಿ ತಂತ್ರಜ್ಞಾನ ಕ್ಷೇತ್ರದ ದೈತ್ಯಕಂಪನಿ ಗೂಗಲ್ ತಿಳಿಸಿದೆ.
ವೈಯಕ್ತಿಕ ಸಾಲ ನೀಡುವ ಕೆಲವು ಮೊಬೈಲ್ ಅಪ್ಲಿಕೇಷನ್‌ಗಳು ಗ್ರಾಹಕರನ್ನು ವಂಚಿಸುತ್ತಿವೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಇಂಥ ನೂರಾರು ಮೊಬೈಲ್ ಅಪ್ಲಿಕೇಷನ್‌ಗಳನ್ನು ಗೂಗಲ್ ಪರಿಶೀಲನೆಗೆ ಒಳಪಡಿಸಿದೆ.
ಯಾವ ಅಪ್ಲಿಕೇಷನ್‌ಗಳು ಬಳಕೆದಾರರ ಸುರಕ್ಷತಾ ನೀತಿಗಳನ್ನು ಉಲ್ಲಂಘಿಸಿವೆಯೋ ಅಂಥವನ್ನು ಪ್ಲೇಸ್ಟೋರ್‌ನಿಂದ ತೆಗೆದು ಹಾಕಿರುವುದಾಗಿ ಗೂಗಲ್ ತಿಳಿಸಿದೆ.