ನವದೆಹಲಿ: ಕೇರಳ ವಿಧಾನಸಭೆಗೆ ಚುನಾವಣೆ ಏಪ್ರಿಲ್‍ನಲ್ಲಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿ.ಬಿ.ಎಸ್.ಇ ಪರೀಕ್ಷೆ ಮೇ 4 ರಿಂದ ಮೊದಲ್ಗೊಂಡು 14 ರ ವರೆಗೆ ನಡೆಯಲಿರುವುದರಿಂದ ಚುನಾವಣಾ ಆಯೋಗ ಅದಕ್ಕಿಂತಲೂ ಮೊದಲು ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸಲಹೆ ನೀಡಲಾಗಿದ್ದು ಅಂತಿಮ ನಿರ್ಧಾರ ಇನ್ನಷ್ಟೇ ಸೂಚಿಸಲ್ಪಡಲಿದೆ.
ಏಪ್ರಿಲ್ 4 ರಂದು ಈಸ್ಟರ್ ಮತ್ತು 14 ರಂದು ವಿಶು ಹಬ್ಬಗಳಿದ್ದು ಈ ಮಧ್ಯೆ ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಪ್ರಸ್ತುತ 14 ನೇ ವಿಧಾನಸಭೆಯ ಅವಧಿ ಜೂನ್ 1 ಕ್ಕೆ ಕೊನೆಗೊಳ್ಳುತ್ತದೆ. ಹೊಸ ಮಂತ್ರಿ ಮಂಡಲ ಜೂನ್ 1 ರ ಮೊದಲು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಇದನ್ನನುಸರಿಸಿ ಚುನಾವಣಾ ವ್ಯವಸ್ಥೆಗಳನ್ನು ನಡೆಸಬೇಕಾಗಿದೆ.
ಕೇರಳ ಹೊರತಾಗಿ ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆ ಏಪ್ರಿಲ್ ಕೊನೆಯಲ್ಲಿ ಅಥವಾ ಮೇ ಆರಂಭದಲ್ಲಿ ನಡೆಯಲಿದೆ. ಕೇಂದ್ರ ಚುನಾವಣಾ ಆಯೋಗವು ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದೆ. ಎಲ್ಲಾ ಐದು ರಾಜ್ಯಗಳ ಚುನಾವಣೆಗಳನ್ನು ಫೆಬ್ರವರಿ 1 ರಂದು ಪ್ರಕಟಿಸಲಾಗುವುದು. ಇದು ಮಾರ್ಚ್ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಪ್ರಕಟಿಸಲಾಗುವುದು.