ತಿರುವನಂತಪುರ: ರಾಜ್ಯದಲ್ಲಿ ಮದ್ಯದ ಬೆಲೆಯನ್ನು ಹೆಚ್ಚಿಸಬೇಕಾಗುತ್ತದೆ ಎಂದು ಅಬಕಾರಿ ಸಚಿವ ಟಿ.ಪಿ. ರಾಮಕೃಷ್ಣನ್ ತಿಳಿಸಿದ್ದಾರೆ. ಪ್ರಸ್ತಾವನೆಯು ಈಗಿನ ಮೂಲ ಬೆಲೆಗಿಂತ ಶೇಕಡಾ 7 ರಷ್ಟು ಹೆಚ್ಚಳಕ್ಕೆ ಚಿಂತಿಸಲಾಗುತ್ತಿದೆ ಎಮದು ಸಚಿವರು ತಿಳಿಸಿರುವರು.
ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ಬಿವರೇಜ್ ಕಾರ್ಪೋರೇಶನ್ ತೆಗೆದುಕೊಳ್ಳುತ್ತದೆ. ಕಚ್ಚಾ
ಸರಕುಗಳ ಹೆಚ್ಚಿನ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಹೊಸ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿರುವನಂತಪುರಂನಲ್ಲಿ ಹೇಳಿದರು.
ಮದ್ಯದ ಬೆಲೆಗಳ ಬಗ್ಗೆ ಬೆವ್ಕೊ ನಿರ್ಧಾರವನ್ನು ಶೀಘ್ರದಲ್ಲೇ ಅನುಮೋದಿಸುವ ನಿರೀಕ್ಷೆಯಿದೆ. ತೆರಿಗೆಯ ಪ್ರಮಾಣಾನುಗುಣ ಹೆಚ್ಚಳದೊಂದಿಗೆ, ಮದ್ಯದ ಬೆಲೆ ಪ್ರತಿ ಲೀಟರ್‍ಗೆ ಕನಿಷ್ಠ 100 ರೂ. ಹೆಚ್ಚಳಗೊಳ್ಳಲಿದೆ.
ಬಿವರೇಜ್ ಕಾರ್ಪೋರೇಶನ್ ಆಲ್ಕೋಹಾಲ್ ಉತ್ಪಾದನೆಗೆ ಹೆಚ್ಚುವರಿ ತಟಸ್ಥ ಆಲ್ಕೋಹಾಲ್ (ಸ್ಪಿರಿಟ್) ಬೆಲೆಯ ಆಧಾರದ ಮೇಲೆ ಖರೀದಿ ಒಪ್ಪಂದವನ್ನು ಮುಕ್ತಾಯಗೊಳಿಸಿದೆ. ಸ್ಪಿರಿಟ್‍ಗೆ ಪ್ರತಿ ಲೀಟರ್‍ಗೆ 35 ರೂ. ಬೆಲೆಯಿದ್ದಾಗ, ದೃಢಪಡಿಸಿದ ಟೆಂಡರ್ ಪ್ರಕಾರ ಬೆವ್ಕೋಗೆ ಇಂದು ಮದ್ಯ ಸರಬರಾಜಾಗುತ್ತಿದೆ. ಆದರೆ ಸ್ಪಿರಿಟ್ ಪ್ರತಿ ಲೀಟರ್‍ಗೆ 60 ರೂ.ಗಳನ್ನು ದಾಟಿದ ನಂತರವೂ ಕಂಪನಿಗಳಿಂದ ಖರೀದಿಸಿದ ಮದ್ಯದ ಬೆಲೆ ಏರಿಕೆಯಾಗಿಲ್ಲ.
ಪೂರೈಕೆದಾರರು ಸತತ ವಿನಂತಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಎರಡು ಬಾರಿ ಟೆಂಡರ್ ನವೀಕರಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಪ್ರಕ್ರಿಯೆಗಳ ಜಾರಿಗೊಳ್ಳಲಿಲ್ಲ. ಏತನ್ಮಧ್ಯೆ, ಕೋವಿಡ್ ಅವಧಿಯಲ್ಲಿನ ಆದಾಯದ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಆಲ್ಕೋಹಾಲ್ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 35 ರಷ್ಟು ಹೆಚ್ಚಿಸಲಾಗಿದೆ.
ಬುಧವಾರ ಸಭೆ ಸೇರಿದ್ದ ಬೆವ್ಕೊ ನಿರ್ದೇಶಕರ ಮಂಡಳಿ, ಮದ್ಯದ ಮೂಲ ಬೆಲೆಯನ್ನು ಶೇಕಡಾ 7 ರಷ್ಟು ಹೆಚ್ಚಿಸಲು ನಿರ್ಧರಿಸಿದೆ.