ಕಾಸರಗೋಡು: ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಇಂದಿನಿಂದ(ಜ.30ರಿಂದ) ಫೆ.2 ವರೆಗೆ ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಇಂದು ಮಧ್ಯಾಹ್ನ 3 ಗಂಟೆಗೆ ಕಾಸರಗೋಡು ಜಿಲ್ಲಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗುವ ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಜಲಸಂರಕ್ಷಣೆ ಯೋಜನೆಗಳನ್ನು ಉದ್ಘಾಟಿಸುವರು. ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಮಹಾತ್ಮಾಗಾಂಧಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವರು.
ಜ.31ರಂದು ಬೆಳಗ್ಗೆ 9.30ಕ್ಕೆ ಪುಲ್ಲೂರು ವಣ್ಣಾನ್ ವಯಲ್ ನಲ್ಲಿ ನಡೆಯುವ ನ್ಯಾಯವಾದಿ ಪಿ.ಕೃಷ್ಣನ್ ನಾಯರ್ ಮಂದಿರದ ಶಿಲಾನ್ಯಾಸ ಸಮಾರಂಭ, 11 ಗಂಟೆಗೆ ಇರಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ, 11.30ಕ್ಕೆ ಬೇಳೂರು ಅಟ್ಟೆಂಗಾನಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ, ಮಧ್ಯಾಹ್ನ 3 ಗಂಟೆಗೆ ಭೀಮನಡಿ ಗ್ರಾಮ ಸ್ಟಾಫ್ ಕ್ವಾರ್ಟರ್ಸ್ ಉದ್ಘಾಟನೆ, ಸಂಜೆ 5 ಗಂಟೆಗೆ ಚೆಮ್ಮಟ್ಟಂವಯಲ್ ಗುರುವಾಯೂರು ಸತ್ಯಾಗ್ರಹ ಸ್ಮಾರಕ ಮಂದಿರದಲ್ಲಿ ನಡೆಯುವ ಕೆ.ಮಾಧವನ್ ಫೌಂಡೇಶನ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಭಾಗವಹಿಸುವರು.
ಫೆ.1ರಂದು ಬೆಳಗ್ಗೆ 9.30ಕ್ಕೆ ಹೊಸಬೆಟ್ಟು ಗ್ರಾಮ ಕಚೇರಿಯ ಉದ್ಘಾಟನೆ, 11 ಗಂಟೆಗೆ ಪೆರಿಯ ಸರಕಾರಿ ಕಿರಿಯ ಪ್ರಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನೆ, ಮಧ್ಯಾಹ್ನ 2.30ಕ್ಕೆ ಪುಂಜಾವಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಸೆಂಬ್ಲಿ ಸಭಾಂಗಣ ಉದ್ಘಾಟನೆ, ಸಂಜೆ 4 ಗಂಟೆಗೆ ಸರಕಾರಿ ಎಫ್.ಯು.ಪಿ.ಶಾಲೆಯ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಭಾಗವಹಿಸುವರು.
ಫೆ.2ರಂದು ಬೆಳಗ್ಗೆ 10 ಗಂಟೆಗೆ ಟಿ.ಬಿ. ಹೊಸದುರ್ಗ ಕೋಟ್ರಚ್ಚಾಲ್ ಟಿ.ಬಿ.ಸ್ಮಶಾನ ಉದ್ಘಾಟನೆ, 11 ಗಂಟೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೀಕಾಂಕೋಡು ಪ್ಲೇ ಫೆÇೀರ್ ಹೆಲ್ತ್ ಯೋಜನೆಯ ಉದ್ಘಾಟನೆ ಸಮಾರಂಭದಲ್ಲಿ ಅವರು ಭಾಗವಹಿಸುವರು.