ಇಂಧೋರ್ : ರಾಜಸ್ಥಾನದ ಇಂಧೋರ್‌ನಲ್ಲಿ ನೂರಾರು ಕಾಗೆಗಳ ಮಾರಣಹೋಮ ಕುರಿತು ಪರೀಕ್ಷೆ ನಡೆದ ಬಳಿಕ ಹಕ್ಕಿ ಜ್ವರ ಎಂದು ಪತ್ತೆಯಾಗಿದ್ದು, ಸುತ್ತಮುತ್ತಲಿನ ನಗರಗಳು ಸೇರಿದಂತೆ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
"ಈವರೆಗೆ ಕೋಟಾದಲ್ಲಿ 47, ಜಾಲವರ್‌ನಲ್ಲಿ 100 ಮತ್ತು ಬಾರನ್‌ನಲ್ಲಿ 72 ಕಾಗೆಗಳು ಸಾವನ್ನಪ್ಪಿವೆ. ಆದರೆ ಬುಂಡಿಯಲ್ಲಿ ಯಾವುದೇ ಸಾವು ವರದಿಯಾಗಿಲ್ಲ. ಜಾಗೃತಿ ಮೂಡಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ'' ಎಂದು ರಾಜಸ್ಥಾನದ ಪ್ರಧಾನ ಕಾರ್ಯದರ್ಶಿ ಕುಂಜಿ ಲಾಲ್ ಮೀನಾ ಭಾನುವಾರ ತಿಳಿಸಿದ್ದಾರೆ.
ಶನಿವಾರ ಜಾಲವರ್‌ನಲ್ಲಿ 25, ಬಾರ್ರಾದಲ್ಲಿ 19 ಮತ್ತು ಕೋಟಾದಲ್ಲಿ 22 ಸಾವುಗಳು ವರದಿಯಾಗಿವೆ. ಜೋಧಪುರದಲ್ಲಿ 152 ಕಾಗೆಗಳು ಶವವಾಗಿ ಪತ್ತೆಯಾಗಿವೆ. ಇತರ ಸ್ಥಳಗಳಾದ ಕೋಟಾ, ಪಾಲಿಯಿಂದ ಕಾಗೆಗಳ ಸಾವು ವರದಿಯಾಗಿದೆ. ಕಿಂಗ್‌ಫಿಶರ್‌ಗಳು ಮತ್ತು ಮ್ಯಾಗ್‌ಪೈಸ್‌ಗಳಂತಹ ಪಕ್ಷಿಗಳು ಸಹ ಸತ್ತಿರುವುದು ವರದಿಯಾಗಿದೆ.
ಪಕ್ಷಿ ಜ್ವರದಿಂದ ಸಾವು ಸಂಭವಿಸುತ್ತಿರುವ ಪ್ರದೇಶಗಳಿಂದ ಮಾದರಿಗಳನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಕಾಲೇಜು ಇರುವ ರೆಸಿಡೆನ್ಸಿ ಪ್ರದೇಶದಲ್ಲಿ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೀತ, ಕೆಮ್ಮು ಮತ್ತು ಜ್ವರ ಇರುವವರನ್ನು ಪತ್ತೆಹಚ್ಚಲು ಸಮೀಕ್ಷೆ ನಡೆಸಲಾಗುತ್ತಿದೆ.