ಕಾಸರಗೋಡು: ಕೋವಿಡ್ ವಾಕ್ಸಿನೇಷನ್ ಚಟುವಟಿಕೆಗಳ ಸಿದ್ಧತೆ ಪೂರ್ಣಗೊಂಡಿದ್ದು, ಇದರ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ನಡೆಸಿದ ಡ್ರೈ ರನ್ ಯಶಸ್ವಿಯಾಗಿದೆ.
ಕಾಞಂಗಾಡ್ ಜಿಲ್ಲಾ ಆಸ್ಪತ್ರೆ, ಚಿತ್ತಾರಿಕಲ್ಲ್ ಕುಟುಂಬ ಆರೋಗ್ಯ ಕೇಂದ್ರ, ಕಾಸರಗೋಡು ಕಿಂಸ್ ಆಸ್ಪತ್ರೆಗಳಲ್ಲಿ ಡ್ರೈ ರನ್ ನಡೆಸಲಾಗಿತ್ತು. ಕೋವಿಡ್ ವಾಕ್ಸಿ ನೇಷನ್ ನ ಎಲ್ಲ ಕ್ರಮಗಳನ್ನೂ ಅದೇ ರೂಪದಲ್ಲಿ ಈ ಮೂರು ಕೇಂದ್ರಗಳಲ್ಲಿ ನಡೆಸಲಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್, ಜಿಲ್ಲಾ ಅಸ್ಪತ್ರೆ ವರಿಷ್ಠಾಧಿಕಾರಿ ಡಾ.ಪ್ರಕಾಶ್ ಕೆ., ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಮುರಳೀಧರ ನಲ್ಲೂರಾಯ, ಜಿಲ್ಲಾ ಅಸ್ಪತ್ರೆ ಆರ್.ಎಂ.ಒ. ಡಾ.ಶ್ರೀಜಿತ್ ಮೋಹನ್, ಹೊಸದುರ್ಗ ಎಸ್.ಐ. ಸಿ.ಬಾಲಕೃಷ್ಣನ್, ಆರೋಗ್ಯ ಇನ್ಸ್ ಪೆಕ್ಟರ್ ಮುಹಮ್ಮದ್ ಕುಟ್ಟಿ, ಸಾರ್ವಜನಿಕ ಆರೋಗ್ಯ ದಾದಿ ದಾಕ್ಷಾಯಿಣಿ ನೇತೃತ್ವ ವಹಿಸಿದ್ದರು.
ಚಿತ್ತಾರಿಕಲ್ಲ್ ಕುಟುಂಬ ಆರೋಗ್ಯ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷ ಜೇಮ್ಸ್ ಪಂದಮಾಕ್ಕಾಲ್, ಉಪಾಧ್ಯಕ್ಷೆ ಫಿಲೋಮಿನಾ ಜಾನಿ, ಡಾ. ಜಾನ್ ಜಾನ್ ಕೆ., ಡಾ.ಸೂರ್ಯಾ ರಾಘವನ್, ಆರೋಗ್ಯ ಇನ್ಸ್ ಪೆಕ್ಟರ್ ಪಿ.ಟಿ.ಶ್ರೀನಿವಾಸನ್, ಸಾರ್ವಜನಿಕ ಆರೋಗ್ಯ ದಾದಿ ಗೀತಾಮಣಿ ನೇತೃತ್ವ ವಹಿಸಿದ್ದರು.
ಕಾಸರಗೋಡು ಕಿಂಸ್ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಜನರಲ್ ಆಸ್ಪತ್ರೆಯ ವರಿಷ್ಠಾಧಿಕಾರಿ ಡಾ.ರಾಜಾರಾಮ, ಡಾ.ನಿರ್ಮಲ್, ಡಾ.ನಾರಾಯಣ ನಾಯ್ಕ್, ಡಾ.ಮ್ಯಾಥ್ಯೂ ಜೆ. ವಾಲಪರಂಬಿಲ್ ನೇತೃತ್ವ ವಹಿಸಿದ್ದರು.
ಖಾಸಗಿ ವಲಯದ ಸಹಿತ ಆರೋಗ್ಯ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತೆಯರಿಗೆ ಸಹಿತ ಕ್ಷೇತ್ರ ಮಟ್ಟದ ಸ್ವಯಂ ಸೇವಕರು ಸೇರಿದಂತೆ 5750 ಮಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ವಾಕ್ಸೀನ್ ನೀಡಲಾಗುವುದು.