ಮಥುರಾ: 'ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮ ಮಂದಿರದಲ್ಲಿ ರಾವಣನ ಪ್ರತಿಮೆಯನ್ನು ನಿರ್ಮಿಸಬೇಕು' ಎಂದು ಲಂಕೇಶ್ ಭಕ್ತ ಮಂಡಳಿ ಶುಕ್ರವಾರ ಒತ್ತಾಯಿಸಿದೆ.
ಈ ಸಂಬಂಧ ಮಂಡಳಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷರಿಗೆ ಪತ್ರವನ್ನೂ ಬರೆದಿದೆ.
'ಪ್ರತಿಮೆ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಲಂಕೇಶ್ ಭಕ್ತ ಮಂಡಳಿಯೇ ಭರಿಸಲಿದೆ' ಎಂದು ಮಂಡಳಿಯ ಅಧ್ಯಕ್ಷ ಓಂವೀರ್ ಸಾರಸ್ವತ್ ಅವರು ಹೇಳಿದ್ದಾರೆ.