ನವದೆಹಲಿ: ಗಣರಾಜ್ಯೋತ್ಸವ ಪರೇಡ್‌ಗೆ ಕೊನೆಯ ಕ್ಷಣದಲ್ಲಿ ಮುಖ್ಯ ಅತಿಥಿಯ ಬದಲಾವಣೆಯಾಗಿದ್ದು, ಬ್ರಿಟಿನ್ ಪ್ರಧಾನಿ ಬದಲಿಗೆ ಭಾರತೀಯ ಮೂಲದ ಸುರಿನಾಮ್ ಅಧ್ಯಕ್ಷ ಮುಖ್ಯ ಅತಿಥಿಯಾಗಲಿದ್ದಾರೆ.
ಬ್ರಿಟನ್‌ನಲ್ಲಿ ರೂಪಾಂತರಿ ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಪ್ರವಾಸವನ್ನು ಅಲ್ಲಿಯ ಪ್ರಧಾನಿ ಬೋರಿಸ್ ಜಾನ್ಸನ್ ರದ್ದುಗೊಳಿಸಿದ್ದಾರೆ.
ಹೀಗಾಗಿ ಪ್ರವಾಸಿ ಭಾರತೀಯ ದಿನದ ಮುಖ್ಯ ಅತಿಥಿಯಾಗಿರುವ ಸುರಿನಾಮ್ ಅಧ್ಯಕ್ಷ ಚಂದ್ರಿಕಾಪ್ರಸಾದ್ ಸಂತೋಖಿ ಅವರೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಲಿದ್ದಾರೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕಳೆದ ಜುಲೈನಲ್ಲೇ ಸರ್ವಾಧಿಕಾರದಿಂದ ಮುಕ್ತಿ ಪಡೆದು ನೂತನ ಸರ್ಕಾರ ರಚನೆಯಾಗಿದೆ.
ಚಂದ್ರಿಕಾಪ್ರಸಾದ್ ನೇತೃತ್ವದ ಯುನೈಟೆಡ್ ಹಿಂದೂಸ್ತಾನಿ ಪಕ್ಷ ಅಧಿಕಾರದಲ್ಲಿದೆ. ಸ್ವಾತಂತ್ರ್ಯಾ ಪೂರ್ವದಲ್ಲಿ ಡಚ್ಚರ ಆಳ್ವಿಕೆಯಲ್ಲಿದ್ದ ಸುರಿನಾಮ್‌ನಲ್ಲಿ ಭಾರತೀಯರು ದೊಡ್ಡ ಪ್ರಮಾಣದಲ್ಲಿದ್ದಾರೆ.