HEALTH TIPS

ಲಸಿಕೆಯನ್ನೂ ರಾಜಕೀಯಕ್ಕೆ ತಿರುಗಿಸಿಬಿಟ್ಟಿರಲ್ಲಾ? ನೋವಾಗುತ್ತಿದೆ ಎಂದ ಭಾರತ್​ ಬಯೋಟೆಕ್​ ಸಂಸ್ಥೆ

         ನವದೆಹಲಿ: ಕರೊನಾ ಸೋಂಕಿಗೆ ಹೈದರಾಬಾದ್​ನ ಭಾರತ್​ ಬಯೋಟೆಕ್​ ಸಂಸ್ಥೆ ಸಿದ್ಧಪಡಿಸಿರುವ ಕೊವ್ಯಾಕ್ಸಿನ್​ ಲಸಿಕೆ ಭಾನುವಾರ ತಾನೆ ತುರ್ತು ಬಳಕೆಗೆ ಡಿಜಿಸಿಐ ಅನುಮತಿ ಪಡೆದಿದೆ. ಅಷ್ಟರಲ್ಲಾಗಲೇ ಕೆಲ ವಿರೋಧ ಪಕ್ಷದ ನಾಯಕರು ಅದನ್ನು ಬಿಜೆಪಿ ಲಸಿಕೆ ಎಂದು ಟೀಕಿಸಿದ್ದು, ಲಸಿಕೆಯ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ. ಇದು ಆತುರದ ನಿರ್ಧಾರ ಎಂದು ಕೆಲ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿಬಿಟ್ಟಿದ್ದಾರೆ. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ಭಾರತ್​ ಬಯೋಟೆಕ್​ ಸಂಸ್ಥೆ ಇಂದು ಪತ್ರಿಕಾಗೋಷ್ಠಿ ನಡೆಸಿದ್ದು, ಕೆಲವೊಂದಿಷ್ಟು ಸ್ಪಷ್ಟನೆ ನೀಡಿದೆ.

        ಭಾರತ್ ಬಯೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಸೋಮವಾರದಂದು ಮಾಧ್ಯಮ ಗೋಷ್ಠಿ ನಡೆಸಿದರು. ನಮ್ಮ ದೇಶದ ಕೊವ್ಯಾಕ್ಸಿನ್​ ಲಸಿಕೆ ತುರ್ತು ಬಳಕೆಗೆ ಅನುಮತಿ ದೊರೆತಿರುವುದು ಹೆಮ್ಮೆಯ ವಿಚಾರ. ಲಸಿಕೆ ಅಭಿವೃದ್ಧಿಯಲ್ಲಿ ಇದು ನಮ್ಮ ದೈತ್ಯ ಹೆಜ್ಜೆ. ಪೂರ್ತಿ ರಾಷ್ಟ್ರವೇ ಈ ವಿಚಾರದಲ್ಲಿ ಹೆಮ್ಮೆ ಪಡಬೇಕು. ಆದರೆ ಈ ಲಸಿಕೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ವಿಚಾರ ನಮಗೆ ನೋವು ತಂದಿದೆ. ದಯಮಾಡಿ ಅಂತಹ ತಪ್ಪು ಮಾಡಬೇಡಿ, ಲಸಿಕೆಯನ್ನು ರಾಜಕೀಯಗೊಳಿಸಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ.

ಸೂಕ್ತ ದಾಖಲೆಗಳಿಲ್ಲದೆ ಆತುರದಲ್ಲಿ ಲಸಿಕೆ ಬಿಡುಗಡೆ ಮಾಡಲಾಗಿದೆ ಎನ್ನುವ ಆರೋಪದ ಬಗ್ಗೆ ಮಾತನಾಡಿರುವ ಅವರು, ನಮ್ಮದು ಕೇವಲ ಭಾರತಕ್ಕೆ ಸೀಮಿತವಾದ ಸಂಸ್ಥೆಯಲ್ಲ. ಜಾಗತಿಕ ಸಂಸ್ಥೆ. ಬ್ರಿಟನ್​ ಸೇರಿ 12ಕ್ಕೂ ಹೆಚ್ಚು ದೇಶಗಳಲ್ಲಿ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ನಡೆಸಿದ್ದೇವೆ ಮತ್ತು ನಡೆಸುತ್ತಿದ್ದೇವೆ. ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಹಾಗೂ ಇತರೆ ದೇಶಗಳಲ್ಲೂ ಲಸಿಕೆ ಪ್ರಯೋಗ ನಡೆಯುತ್ತಿದೆ. ಲಸಿಕೆಯ ಬಗ್ಗೆ ಅನುಭವ ಇಲ್ಲದ ಸಂಸ್ಥೆ ನಮ್ಮದಲ್ಲ. 123 ದೇಶಗಳ ಸಂಪರ್ಕ ನಮಗಿದೆ. ಜಾಲತಾಣಗಳಲ್ಲಿ ನಮ್ಮ ಬಗ್ಗೆ ಎಷ್ಟು ವರದಿ ಬಂದಿದೆ ಎನ್ನುವುದನ್ನು ಒಮ್ಮೆ ನೋಡಿ. ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಕನಿಷ್ಠ 70 ಬಾರಿಯಾದರೂ ನಮ್ ಲಸಿಕೆಯ ಬಗ್ಗೆ ವರದಿ ಪ್ರಕರಟವಾಗಿದೆ. ಜನರು ಸುಮ್ಮನೆ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries