ನವದೆಹಲಿ: ಕೃಷಿ ಸುಧಾರಣಾ ಕಾಯ್ದೆ ಹಿಂಪಡೆಯುವುದನ್ನು ಹೊರತುಪಡಿಸಿ, ಪ್ರತಿಭಟನಾ ನಿರತ ರೈತರು ಪರ್ಯಾಯ ಕ್ರಮಗಳ ಕುರಿತು ಚಿಂತನೆ ನಡೆಸಬೇಕಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ನಾಳೆ ನಡೆಯಲಿರುವ ರೈತ ಮುಖಂಡರು ಮತ್ತು ಸರ್ಕಾರದ ನಡುವಿನ 10ನೇ ಸುತ್ತಿನ ಮಾತುಕತೆಯಲ್ಲಿ, ಕೃಷಿ ಸುಧಾರಣೆಯ ಕುರಿತು ಸಮಗ್ರ ಚರ್ಚೆ ನಡೆಸುವಂತೆ ಹಾಗೂ ಪರ್ಯಾಯ ಮಾರ್ಗಗಳನ್ನು ಪ್ರಸ್ತುತಪಡಿಸುವಂತೆ ಪ್ರತಿಭಟನಾ ನಿರತ ರೈತರಿಗೆ ಸಚಿವರು ಮನವಿ ಮಾಡಿದ್ದಾರೆ.ಸರ್ಕಾರ, ಈಗಾಗಲೇ ರೈತ ಸಂಘಟನೆಗಳಿಗೆ ಪ್ರಸ್ತಾವನೆ ಕಳುಹಿಸಿದ್ದು, ಮಂಡಿಗಳು, ವ್ಯಾಪಾರಿಗಳ ನೋಂದಣಿ ಮತ್ತು ಇತರ ಸಂದೇಹಗಳ ಕುರಿತು ಸ್ಪಷ್ಟೀಕರಣ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.ಶುಕ್ರವಾರ ನಡೆದ 9ನೇ ಸುತ್ತಿನ ಮಾತುಕತೆ ಕೂಡ ಯಾವುದೇ ನಿರ್ಣಾಯಕ ಹಂತ ತಲುಪಲು ವಿಫಲವಾಗಿತ್ತು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಧೈರ್ಯಶಾಲಿ ಹೆಜ್ಜೆ ಹಲವು ವರ್ಷಗಳ ಚರ್ಚೆಗಳ ನಂತರ ಕೃಷಿ ಕ್ಷೇತ್ರವನ್ನು ಸುಧಾರಿಸುತ್ತದೆ ಮತ್ತು ರೈತರ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಿದರು.