ಮಂಜೇಶ್ವರ: ಕೇರಳ ಪೆನ್ಶನರ್ಸ್ ಸಂಘ್‍ನ ಕಾಸರಗೋಡು ಜಿಲ್ಲಾ ಘಟಕದ ಸಮ್ಮೇಳನವು ಹೊಸಂಗಡಿ ಪ್ರೇರಣಾ ಹಾಲ್‍ನಲ್ಲಿ ಜರಗಿತು. ಸಂಘಟನೆಯ ಅಧ್ಯಕ್ಷ ಈಶ್ವರ ರಾವ್ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪ್ಕೋ ನಿರ್ದೇಶಕ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಭಾಷಣಗಾರರಾದ ಸುಬ್ರಾಯ ನಂದೋಡಿ ಮಾತನಾಡಿ ನಿವೃತ್ತಿಯ ನಂತರದ ಸಮಯವನ್ನು ಸಮಾಜ ಸೇವೆಗಾಗಿ ಮೀಸಲಿಡಬೇಕು ಎಂದರು. ನಮ್ಮ ಸಂಘಟನೆಯ ರಾಷ್ಟ್ರೀಯ ವಿಚಾರಧಾರೆಯ ಬಗ್ಗೆ ಮತ್ತು ಸಂಘಟನೆಯನ್ನು ಬಲಪಡಿಸುವ ಕುರಿತು ಮಾಹಿತಿಗಳನ್ನು ಹಂಚಿಕೊಂಡರು. ಕೊರೋನದಿಂದ ಉಂಟಾದ ತೊಂದರೆಗಳು ಹಾಗೂ ತದನಂತರದ ಬೆಳವಣಿಗೆಯ ಬಗ್ಗೆ ಮಾತನಾಡಿದರು. ದೇಶೀಯ ಅಧ್ಯಾಫಕ ಸಂಘದ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ಶುಭಹಾರೈಸಿದರು. ಬೆಳಗ್ಗೆ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಕಾರ್ಯದರ್ಶಿ ಅರವಿಂದ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ, ಮಾಧವನ್ ನಾಯರ್ ವಂದಿಸಿದರು. ನಂತರ ಪ್ರತಿನಿಧಿ ಸಮ್ಮೇಳನ ನಡೆಯಿತು.