ಬದಿಯಡ್ಕ: ಬದಿಯಡ್ಕದಲ್ಲಿ ಒಂದೂವರೆ ವರ್ಷದ ಮಗು ಸ್ವತಿಕ್‌ಳ ತಾಯಿಯನ್ನು ಸಾವಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಕುಟುಂಬದ ಜಗಳದ ಕಾರಣ ಉಂಟದ ವಿವಾದ ಮಗುವನ್ನು ಬಾವಿಗೆ ಎಸೆದು ಕೊಲ್ಲುವಲ್ಲಿವರೆಗೆ ತಲಪಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.ಪೆರ್ಲತ್ತಡ್ಕ ನಿವಾಸಿ ಶಾರದಾ ಬಂಧಿತಳಾದ ತಾಯಿ.
ಸ್ವಾತಿಕ್ ಕಳೆದ ತಿಂಗಳು 4 ರಂದು ಸಾರ್ವಜನಿಕ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಸ್ಥಳೀಯರು ನಡೆಸಿದ ಶೋಧದ ವೇಳೆ ಮಗುವಿನ ಶವ ಪತ್ತೆಯಾಗಿದೆ. ಮೊದಲಿಗೆ ಮಗು ಬಾವಿಗೆ ಬಿದ್ದಿರಬಹುದು ಎಂದು ಭಾವಿಸಲಾಗಿತ್ತು.