ಮುಳ್ಳೇರಿಯ: ಕಾನತ್ತೂರಲ್ಲಿ ನಡೆದ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣದ ಬಗ್ಗೆ ಪೋರೆನ್ಸಿಕ್ ತಂಡ ತನಿಖೆ ನಡೆಸಿದೆ. ಪತ್ನಿಯನ್ನು ಗುಂಡಿಕ್ಕಿ ಕೊಲೆಗೈದು ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಬಂಧ ತನಿಖಾ ಅಧಿಕಾರಿ ಅಡೂರು ಸಿಐ ವಿಕೆ ವಿಶ್ವಂಭರನ್ ನೇತೃತ್ವದ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿತು. ಮನೆಯೊಳಗೆ, ಬೇಬಿ ಶಾಲಿನಿಗೆ ಗುಂಡು ಹಾರಿಸಿದ ಪ್ರದೇಶದ ರಕ್ತದ ಮಾದರಿಗಳು, ಗುಂಡಿನ ಅವಶೇಷಗಳು ಮತ್ತು ಗೋಡೆಗೆ ಚುಚ್ಚಿದ ಗುಂಡಿನ ಗುರುತುಗಳನ್ನು ತಂಡವು ಸಂಗ್ರಹಿಸಿತು.
ವಿಜಯನ್ ಕೊಲೆಗೆ ಬಳಸಿದ ಕೈಬಂದೂಕು ರಬ್ಬರ್ ತೋಟದಲ್ಲಿ ಪತ್ತೆಯಾಗಿದ್ದು, ಅಲ್ಲಿ ವಿಜಯನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರ ಬೆಳಿಗ್ಗೆ 11.50 ರ ಸುಮಾರಿಗೆ ಅವರ ಪತ್ನಿ ಬೇಬಿ ಶಾಲಿನಿ ಅವರನ್ನು ಕಾನತ್ತೂರಿನ ಅವರ ಮನೆಯೊಳಗೆ ಗುಂಡಿಕ್ಕಿ ಕೊಲ್ಲಲಾಯಿತು. ಆ ಬಳಿಕ ವಿಜಯನ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದನು. ಮದ್ಯ ಚಟದ ಜೊತೆಗೆ ಪತ್ನಿಯ ಬಗ್ಗೆ ಅನುಮಾನ ಕೊಲೆ ಮತ್ತು ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಪೋಲೀಸರು ತೀರ್ಮಾನಿಸಿದ್ದಾರೆ. ಬಂದೂಕನ್ನು ಬ್ಯಾಲಿಸ್ಟಿಕ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಏಕೈಕ ಆರೋಪಿ ಸಾವನ್ನಪ್ಪಿದ್ದರಿಂದ, ಪೆÇಲೀಸರು ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲು ಮತ್ತು ನ್ಯಾಯಾಲಯದಲ್ಲಿ ತಕ್ಷಣ ಚಾರ್ಜ್‍ಶೀಟ್ ಸಲ್ಲಿಸಲು ನಿರ್ಧರಿಸಿರುವರು. ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ವಿಜಯನ್ ಅವರ ಶವವನ್ನು ಕೋಲಿ ಬಳಿಯ ಕುಟುಂಬ ಕಾಂಪೌಂಡ್‍ನಲ್ಲಿ ಸಂಸ್ಕರಿಸಲಾಯಿತು. ಪರಿಯಾರಂ ಕಣ್ಣೂರು ಸರ್ಕಾರಿ ಆಪತ್ರೆಯಲ್ಲಿ ಬೇಬಿ ಶಾಲಿನಿ ಅವರ ಶವವನ್ನು ವೈದ್ಯಕೀಯ ಮಹಜರು ಮಾಡಲಾಯಿತು. ಕುಂಡಂಗುಳಿಯ ಕೂರಾದಲ್ಲಿರುವ ಅವರ ತವರು ಮನೆಯಲ್ಲಿ ಸಂಸ್ಕಾರ ನಿರ್ವಹಿಸಲಾಗಿದೆ.