ಪೆರ್ಲ: ಬದಿಯಡ್ಕ ಪೋಲೀಸ್ ಠಾಣಾ ವ್ಯಾಪ್ತಿಯ ಎಣ್ಮಕಜೆ ಪಂಚಾಯತಿಯ ಸಾಯ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ಎಸ್‍ಸಿ-ಎಸ್‍ಟಿ) ಕಾಲನಿಗೆ ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯವರ ಸಂದರ್ಶನದ ಭಾಗವಾಗಿ ಸಾಯ ಶ್ರೀದುರ್ಗಾಪರಮೇಶ್ವರಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಕಾಲನಿ ನಿವಾಸಿಗಳ ಸಮಸ್ಯೆ ಬಗೆಗಿನ ದೂರುಗಳನ್ನು ಸ್ವೀಕರಿಸುವ ಅದಾಲತ್ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶಿಲ್ಪಾ.ಡಿ ಉದ್ಘಾಟಿಸಿದರು. ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ. ಜೆ.ಯಸ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಪತಿ ಪದಕ ಪಡೆದ ಸ್ಪಷಲ್ ಬ್ರಾಂಚ್ ಡಿವೈಎಸ್‍ಪಿ ಹರಿಶ್ಚಂದ್ರ ನಾಯ್ಕ್ ಉಪಸ್ಥಿತರಿದ್ದು ಶುಭಾಶಂಸನೆ ಗೈದು ಲಿಖಿತವಾಗಿ ಬಂದ ದೂರುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಇಲಾಖೆಗೆ ನಿರ್ದೇಶನ ನೀಡಿದರು. ಎಣ್ಮಕಜೆ ಪಂಚಾಯತಿ ಸಾಯ ವಾರ್ಡ್ ಪ್ರತಿನಿಧಿ ಮಹೇಶ್ ಕುಮಾರ್ ಭಟ್ ಕೂರ್ಲುಗಯ, ಶ್ರೀ ದುರ್ಗಾ ಪರಮೇಶ್ವರಿ ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ, ಕುಂಬಳೆ ಉಪ ಜಿಲ್ಲಾ ವಿಧ್ಯಾಧಿಕಾರಿ ಯತೀಶ್ ಕುಮಾರ್ ರೈ ಶುಭಾಶಂಸನೆ ಗೈದರು.
ಕಳೆದ ವರ್ಷ ಕಾಲನಿಗಳ ಅಂಕಿ-ಅಂಶಗಳನ್ನು ಸಂಗ್ರಹಿಸಿ ನಿಗದಿಯಾಗಿದ್ದ ಕಾರ್ಯಕ್ರಮವು ಕರೋನ ಲಾಕ್ ಡೌನ್ ನಿಂದಾಗಿ ಸ್ಥಗಿತವಾಗಿದ್ದು ಈ ವರ್ಷ ಯಶಸ್ವಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲು ಶ್ರಮ ವಹಿಸಿದ ಬದಿಯಡ್ಕ ಜನಮೈತ್ರಿ ಪೋಲೀಸ್ ಅನೂಪ್ ಮತ್ತು ಮಹೇಶ್ ಹಾಗೂ ತಂಡ, ವಿವಿಧ ಇಲಾಖೆಯ ಅಧಿಕಾರಿಗಳು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಯ ವಾರ್ಡಿನ ಕಾಲನಿ ನಿವಾಸಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು. ಕೇರಳ ಮರಾಟಿ ಎಂಪೆÇ್ಲೀಯಿಸ್ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದು ರಾಷ್ಟ್ರಪತಿ ಪದಕ ಪಡೆದ ಹರಿಶ್ಚಂದ್ರ ನಾಯ್ಕ್ ಅವರಿಗೆ ಊರವರ ಪರವಾಗಿ ಸನ್ಮಾನಿಸಿದರು. ಬದಿಯಡ್ಕ ಪೋಲೀಸ್ ಠಾಣೆಯ ರಾಮಕೃಷ್ಣನ್ ಸ್ವಾಗತಿಸಿ, ಎಣ್ಮಕಜೆ ಪಂಚಾಯತಿ ಪ.ವಿಭಾಗ ಪ್ರಮೋಟರ್ ಅಶೋಕ್ ಚವರ್ಕಾಡ್ ವಂದಿಸಿದರು.