ನೆಯ್ಯಾಟಿಂಗರ: ಕಳೆದ ಎಂಟು ವರ್ಷಗಳಿಂದ ನಕಲಿ ದಾಖಲೆಗಳನ್ನು ನೀಡಿ ಸಾವನ್ನಪ್ಪಿದ ಅಜ್ಜಿಯ ಪಿಂಚಣಿ ಪಡೆದೆ ವಂಚಿಸುತ್ತಿದ್ದ ನೆಯ್ಯಾಟಿಂಗರ ಪ್ರಜಿತ್ (25) ಎಂಬವನನ್ನು ಅರಂಗಮುಗಲ್ ಬಾಬು ಭವನದಲ್ಲಿ ಪೋಲೀಸರು ಕೊನೆಗೂ ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಪ್ರಜಿತ್ ಅವರ ತಾಯಿ ಕೂಡ ಆರೋಪಿಗಳಾಗಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಪ್ರಜಿತ್ ಅವರ ಅಜ್ಜ ಅಪ್ಪುಕುಟ್ಟನ್ ಕೆಎಸ್ ಇ ಬಿ ಉದ್ಯೋಗಿಯಾಗಿದ್ದರು. ಅವರು ತೀರಿಕೊಂಡಾಗ ಅವರ ಪತ್ನಿ ಪೆÇನ್ನಮ್ಮ ಪಿಂಚಣಿ ಪಡೆದರು. ತನ್ನ ಎಟಿಎಂ ಕಾರ್ಡ್ ಬಳಸಲಾಗದ ಪೆÇನ್ನಮ್ಮ ತನ್ನ ಪಿಂಚಣಿ ಹಿಂಪಡೆಯಲು ಮೊಮ್ಮಗ ಪ್ರಜಿತ್ ಸಹಾಯವನ್ನು ಪಡೆಯುತ್ತಿದ್ದರು.
ಆದರೆ ಕಳೆದ ಎಂಟು ವರ್ಷಗಳ ಹಿಂದೆ ಅಜ್ಜಿ ಇಹಲೋಕ ತ್ಯಜಿಸಿದ್ದು, ಮೊಮ್ಮಗ ಅ|ಧಿಕೃತರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ನಕಲಿ ದಾಖಲೆಗಳಿಂದ 10 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ನಂತರ ವಂಚಿಸಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಪ್ರಜಿತ್ ಅವರ ತಾಯಿಯನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ. ನ್ಯಾಯಾಲಯಕ್ಕೆ ಪ್ರಸ್ತುತ ಪ್ರಜಿತ್ ನನ್ನು ಹಾಜರುಪಡಿಸಲಾಗಿದ್ದು ರಿಮಾಂಡ್ ಮಾಡಲಾಗಿದೆ.