HEALTH TIPS

ವಿಧಾನಸಭಾ ಸಮರ :ಮಂಜೇಶ್ವರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಯುವ ನಾಯಕ ವಿಜಯಕುಮಾರ್ ರೈ ಸಾಧ್ಯತೆ..?

 

      ಕಾಸರಗೋಡು: ಮುಂದಿನ ಮೇ.ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಹಲವು ಲೆಕ್ಕಾಚಾರಗಳೊಂದಿಗೆ ತೆರೆಮರೆಯಲ್ಲಿ ಕಾರ್ಯಚಟುವಿಕೆಗಳನ್ನು ವಿಸ್ತರಿಸುತ್ತಿದ್ದು, ಸ್ಪರ್ಧಾಳು ಅಭ್ಯರ್ಥಿಗಳ ಹುಡುಕಾಟ, ಸಮಾಲೋಚನೆಗಳಲ್ಲಿ ವ್ಯಸ್ಥವಾಗಿವೆ. ಈ ಮಧ್ಯೆ ಕೇರಳದಲ್ಲೇ ಅತಿ ಸೂಕ್ಷ್ಮ ಮತ್ತು ಕುತೂಹಲ ಕ್ಷೇತ್ರವಾಗಿ ನಿರೂಪಿಸಲ್ಪಟ್ಟ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದಿನಂತೆ ಯುಡಿಎಫ್-ಬಿಜೆಪಿ ಮಧ್ಯೆ ನೇರ ಹಣಾಹಣಿ ನಿರೀಕ್ಷಿಸಲಾಗಿದೆ.

        ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಸುರೇಂದ್ರನ್ 89 ಮತಗಳಿಂದ ಯುಡಿಎಫ್ ಅಭ್ಯರ್ಥಿ ದಿ. ಪಿ.ಬಿ.ಅಬ್ದುಲ್ ರಖಾಕ್ ಅವರೆದುರು ಪರಾಭವಗೊಂಡಿದ್ದರು. ಇದೀಗ ಮತ್ತೆ ಆ 89 ಮ್ಯಾಜಿಕ್ ಸಂಖ್ಯೆ ಬೆನ್ನತ್ತಿ ಎರಡೂ ಬಣಗಳು ಸಕ್ರಿಯಗೊಳ್ಳುತ್ತಿದ್ದು ಕೈತಪ್ಪಿದ ಸಾಧಕ ಬಾಧಕಗಳ ಅವಲೋಕನದೊಂದಿಗೆ ಬಿಜೆಪಿ ಈ ಬಾರಿ ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲ ಸಾರ್ವಜನಿಕರದ್ದು.  

      ಈ ಮಧ್ಯೆ ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಥಳೀಯರಾದ ಕನ್ನಡಿಗರನ್ನೇ ಕಣಕ್ಕಿಳಿಸಬೇಕೆಂಬ ಬೇಡಿಕೆ ಇಂದು-ನಿನ್ನೆಯದಲ್ಲ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯುವ ನಾಯಕ, ಕನ್ನಡಿಗ ವಿಜಯಕುಮಾರ್ ರೈಯವರಿಗೆ ಟಿಕೆಟ್ ಲಭಿಸುವ ಸಾಧ್ಯತೆಯಿದೆ ಎನ್ನಲಾಗಿದೆ. 

         ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಲೀಗ್‍ನ ಪಿ.ಬಿ ಅಬ್ದುಲ್ ರಜಾಕ್ ಅವರು 89 ಮತಗಳಿಂದ ಬಿಜೆಪಿಯ ಕೆ ಸುರೇಂದ್ರನ್ ಅವರನ್ನು ಪರಾಭವಗೊಳಿಸಿದ್ದರು. ಸಿ.ಪಿ.ಎಂ.ನ ಸಿ.ಎಚ್ ಕುಂಞಂಬು ಮೂರನೇ ಸ್ಥಾನವನ್ನು ಪಡೆದಿದ್ದರು. 2019ರ ವಿಧಾನಸಭೆಯ ಉಪಚುನಾವಣೆಯಲ್ಲಿ ಎಂ.ಸಿ ಕಮರುದ್ದೀನ್ 7923ಮತಗಳಿಂದ ಜಯಗಳಿಸಿದ್ದರು. ಉಪಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಮತಗಳು ಲಭ್ಯವಾಗಿಲ್ಲ. 

        ಫ್ಯಾಷನ್ ಗೋಲ್ಡ್ ಹಗರಣವು ಲೀಗ್ ನವರಿಗೆ ದೊಡ್ಡ ಹೊಡೆತವಾಗಿದ್ದು, ಬಿಜೆಪಿಯಿಂದ ಸ್ಥಳಿಯ ಅಭ್ಯರ್ಥಿ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದಲ್ಲಿ ಈ ಬಾರಿ ಮಂಜೇಶ್ವರದಿಂದ ಬಿಜೆಪಿ ಭರ್ಜರಿ ಜಯಗಳಿಸುತ್ತದೆ ಎಂದು ಕೆಲ ನಾಯಕರ ಅಭಿಪ್ರಾಯವಿದ್ದು, ಈ ನಿಟ್ಟಿನಲ್ಲಿ ಸಮರ್ಥ ಹಾಗೂ ಯುವ ನಾಯಕ, ಕನ್ನಡಿಗ ವಿಜಯಕುಮಾರ್ ರೈಯವರಿಗೆ ಟಿಕೇಟ್ ಲಭಿಸುವ ಬಗ್ಗೆ ಸಾಧ್ಯತೆಯೂ ಹೆಚ್ಚಾಗಿದೆ ಎನ್ನಲಾಗಿದೆ. 

      ಬಿಜೆಪಿಯ ಹಿರಿಯ ನೇತಾರ ಆಗಿದ್ದ ದಿ.ಬಾಬು ರೈ ಅವರ ಮಗ ವಿಜಯ ಕುಮಾರ್ ರೈಯವರು ಹಲವಾರು ಜನ ಪರ ಕಾರ್ಯಗಳಿಗಾಗಿ ಹೋರಾಟವನ್ನು ನಡೆಸಿ ಹೆಚ್ಚಿನ ಎಲ್ಲಾ ಮತದಾರರಿಗೂ ತಿಳಿದವರು. ವಿದ್ಯಾರ್ಥಿಯಾಗಿರುವಾಗ ಕನ್ನಡ ಪರವಾಗಿ ಹೋರಾಟ ನಡೆಸಿ ಅಪ್ಪಟ್ಟ ಕನ್ನಡಿಗರೂ ಆದ ಇವರು ಮಹಾಮಾರಿ ಕೊರೊನ ಸಂದರ್ಭದಲ್ಲಿ ಪರವೂರಿನ ಕಾರ್ಮಿಕರಿಗೆ, ಬಡವರಿಗಾಗಿ ಅನೇಕ ಸೇವಾಕಾರ್ಯ, ತಲಪಾಡಿ ಗಡಿಯಲ್ಲಿ ಅಂತಾರಾಜ್ಯ ಸಂಚಾರದ ಮೇಲೆ ನಿರ್ಬಂದ ವಿಧಿಸಿ ಗಡಿನಾಡಿನ ಜನ ಸಂಕಷ್ಟಕ್ಕೆ ಸಿಲುಕಿದಾಗ ಇದರ ವಿರುದ್ಧ ಹೋರಾಟ ರಂಗದಲ್ಲಿ ಮುಂಚೂಣಿಯಲ್ಲಿದ್ದರು.  ಐಲ ಮೈದಾನ ಕಬಳಿಸಲು ಕೆಲವು ಹಿತಾಸಕ್ತಿಗಳು ಪ್ರಯತ್ನಿಸಿದಾಗ ಪ್ರತಿಭಟನೆಯನ್ನು ನಡೆಸಲು ಮುಂಚೂಣಿಯಲ್ಲಿದ್ದರು. 

     ಲೀಗ್ ಭದ್ರಕೋಟೆ ಮಂಗಲ್ಪಾಡಿಯಲ್ಲಿ ಬಡವರು ಹಾಗೂ ಕಾರ್ಯಕರ್ತರ ಪರ ದನಿಯಾಗಿದ್ದಾರೆ. ಮಾತ್ರವಲ್ಲದೇ ಹಲವಾರು ಧಾರ್ಮಿಕ ಚಟುವಟಿಕೆಯಲ್ಲೂ ಭಾಗಿಯಾಗಿದ್ದಾರೆ. 

        ಪ್ರಸ್ತುತ ಮಲ್ಲಂಗೈ ವಾರ್ಡಿನಿಂದ 639 ವೋಟ್‍ಗಳ ಅಂತರದಲ್ಲಿ ವಿಜಯಕುಮಾರ್ ರೈ ಯವರು ಮೊನ್ನೆಯಷ್ಟೇ ನಡೆರದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಜಯಗಳಿಸಿ ಗ್ರಾಮ ಪಂಚಾಯತಿ ಸದಸ್ಯರಾಗಿದ್ದಾರೆ. 

  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯುವ ನಾಯಕ, ಕನ್ನಡಿಗ ವಿಜಯಕುಮಾರ್ ರೈಯವರಿಗೆ ಟಿಕೆಟ್ ಲಭಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು, ಸಾಮೂಹಿಕ ನಾಯಕತ್ವದ ಕೊರತೆಯನ್ನು ನೀಗಿಸಲು ಇವರು ಸಮರ್ಥರು ಎಂಬ ಮಾತು ಕಾರ್ಯಕರ್ತರ ಮಧ್ಯೆ ಕೇಳಿಬರುತಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries