HEALTH TIPS

ಗೂಗಲ್‌ನ ಗಣರಾಜ್ಯೋತ್ಸವದ ಡೂಡಲ್‌ನಲ್ಲಿ ಭಾರತದ ವರ್ಣರಂಜಿತ ಪರಂಪರೆ

        ನವದೆಹಲಿ: ದೇಶದ 72 ನೇ ಗಣರಾಜ್ಯೋತ್ಸವವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಜಗತ್ತಿನ ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ಸಹ ಗಣರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದೆ.

     ಭಾರತದ ಕಲೆ ಮತ್ತು ವಾಸ್ತುಶಿಲ್ಪ, ಸಾಂಸ್ಕೃತಿಕ ಮತ್ತು ಏಕತೆಯ ಪರಂಪರೆಯನ್ನು ಆಕರ್ಷಕ ಮತ್ತು ವರ್ಣಮಯ ಡೂಡಲ್‌ನಲ್ಲಿ ಗೂಗಲ್ ಸೆರೆಹಿಡಿದಿದೆ.

         ಸುಂದರವಾದ ಡೂಡಲ್ ಕಲಾಕೃತಿಯಲ್ಲಿ ಕೆಂಪು ಕೋಟೆ ಸೇರಿ ದೇಶದ ಐತಿಹಾಸಿಕ ಕಟ್ಟಡಗಳು, ರಾಷ್ಟ್ರಧ್ವಜದಲ್ಲಿರುವ ಕೇಸರಿ, ಬಿಳಿ ಮತ್ತು ಹಸಿರು(ತ್ರಿವರ್ಣದ) ಬಣ್ಣಗಳ ಮುಂಭಾಗದಲ್ಲಿ ದೇಶದ ವಿವಿಧ ಸಂಸ್ಕೃತಿಯ ಜನರನ್ನು ಪ್ರದರ್ಶಿಸುತ್ತಿದೆ. ಗೂಗಲ್ ಕಂಪನಿಯ ಹೆಸರನ್ನು ನೀಲಿ ಬಣ್ಣದಲ್ಲಿ ಮಧ್ಯದಲ್ಲಿ ಅಲಂಕರಿಸಲಾಗಿದೆ.

          ಈ ಹಿಂದೆ ಗೂಗಲ್ ರಿಲೀಸ್ ಮಾಡಿದ್ದ ಹೇಳಿಕೆಯಲ್ಲಿ "ಮುಂಬೈ ಮೂಲದ ಅತಿಥಿ ಕಲಾವಿದ ಓಂಕರ್ ಫೊಂಡೇಕರ್ ಇಂದಿನ ಡೂಡಲ್ ರಚಿಸಿದ್ದಾರೆ, 72 ವರ್ಷಗಳ ಹಿಂದೆ ಭಾರತೀಯ ಸಂವಿಧಾನವು ಜಾರಿಗೆ ಬಂದ ದಿನವನ್ನು ಸಂಸ್ಥೆ ಗೌರವಿಸುತ್ತದೆ . " ಎಂದು ಹೇಳಿತ್ತು.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries