ಕಾಸರಗೋಡು: ಚುನಾವಣೆ ಆಯೋಗದ ಇ.ವಿ.ಎಂ-ವಿವಿಪಾಟ್ ನಿರೀಕ್ಷಕ ವಿ.ರಾಘವೇಂದ್ರ ಅವರು ವಿಧಾನಸಭೆ ಚುನಾವಣೆಯ ಪೂರ್ವಭಾವಿಯಾಗಿ ವಿದ್ಯುನ್ಮಾನ ಮತಯಂತ್ರಗಳು, ವಿವಿಪಾಟ್ ಇತ್ಯಾದಿಗಳ ಪ್ರಾಥಮಿಕ ತಪಾಸಣೆ ನಡೆಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿರುವ ಅವರು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಜೊತೆಗೆ ಸಿವಿಲ್ ಸ್ಟೇಷನ್ ಆವರಣದ ಇ.ವಿ.ಎಂ.ವೇರ್ ಹೌಸ್ಗೆ ಭೇಟಿ ನಿಡಿದರು.
ಇಲ್ಲಿ ವಿದ್ಯುನ್ಮಾನ ಮತಯಂತ್ರಗಳ ತಪಾಸಣೆ ನಡೆಸುತ್ತಿರುವ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯ ಇಂಜಿನಿಯರ್ ಗಳ ಚಟುವಟಿಕೆಗಳ ಅವಲೋಕನ ನಡೆಸಿದರು. ವೇರ್ ಹೌಸ್ ನ ಆಯ್ದ ಇ.ವಿ.ಎಂ., ವಿವಿಪಾಟ್ ಇತ್ಯಾದಿಗಳ ತಪಾಸಣೆಯನ್ನೂ ಅವರು ನಡೆಸಿದರು. ಮತಯಂತ್ರದ ಕಂಟ್ರೋಲ್ ಯೂನಿಟ್, ಬಾಲೆಟ್ ಯೂನಿಟ್ ಇತ್ಯಾದಿಗಳನ್ನು ಕಳಚಿ ತಪಾಸಣೆ ನಡೆಸಲಾಯಿತು. ವೇರ್ ಹೌಸ್ ನ ಫಯರ್ ಎಕ್ಸ್ಟಿಂಗ್ವಿಷರ್ ವ್ಯವಸ್ಥೆಯ ತಪಾಸಣೆಯನ್ನು ನಡೆಸಿದರು.
ಕಾಸರಗೊಡು ಜಿಲ್ಲೆಯ ಇ.ವಿ.ಎಂ.-ವಿವಿಪಾಟ್ ಪ್ರಾಥಮಿಕ ತಪಾಸಣೆಗಳಲ್ಲಿ ಅವರು ಸಂತೃಪ್ತಿ ವ್ಯಕ್ತಪಡಿಸಿದರು. ಇ.ವಿ.ಎಂ. ತಪಾಸಣೆ ತ್ವರಿತಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಗೆ ಹೆಚ್ಚುವರಿ ಎಂಜಿನಿಯರ್ ಗಳನ್ನು ಮಂಜೂರು ಮಾಡಲಾಗುವುದು ಎಂದವರು ತಿಳಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರೊಂದಿಗೆ ಮಾತುಕತೆ ನಡೆಸಿದ ನಂತರ ಅವರು ವೇರ್ ಹೌಸ್ ಗೆ ಭೇಟಿ ನೀಡಿದರು. ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್ ಜೊತೆಗಿದ್ದರು.