ಬದಿಯಡ್ಕ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಆಡಳಿತ ಸಮಿತಿ ಹಾಗೂ ಶ್ರೀ ಚಿರುಂಬಾ ಭಗವತಿ ಪ್ರವಾಸಿ ಅಸೋಸಿಯೇಷನ್ ಆಶ್ರಯದಲ್ಲಿ ಜ್ಞಾನಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸ್ಕಾಲರ್ ಶಿಪ್ ವಿತರಣೆ ನಡೆಯಿತು.
ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಆಚಾರ ಸ್ಥಾನಿಕರಾದ ಅಂಬಾಡಿ ಕಾರ್ನವರ್ ಉದ್ಘಾಟಿಸಿದರು. ಆಡಳಿತ ಸಮಿತಿ ಅಧ್ಯಕ್ಷ ರಾಘವನ್ ಕನಕತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಕಾರ್ನವರ್, ಪಕ್ಕೀರ ಕಾರ್ನವರ್, ಕುಮಾರನ್ ಆಯತ್ತಾರ್, ಕೃಷ್ಣನ್ ಆಯತ್ತಾರ್, ಕುಮಾರನ್ ಬೆಳ್ಚಪ್ಪಾಡ ಮೊದಲಾದವರು ಉಪಸ್ಥಿತರಿದ್ದರು. ಪಟ್ಲ ಶ್ರೀ ಭಗವತಿ ಸೇವಾ ಸಂಘದ ಕಾರ್ಯದರ್ಶಿ ಸುಕುಮಾರ ಕುದ್ರೆಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಇತ್ತೀಚೆಗೆ ನಡೆದ ಪಂಚಾಯತಿ ಚುನಾವಣೆಯಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾದ ಸಮುದಾಯ ಸದಸ್ಯರನ್ನು ಅಭಿನಂದಿಸಲಾಯಿತು. ರಾಮ ಮಾಸ್ತರ್ ಇಕ್ಕೇರಿ, ಚಿರಿಯಂಡ ಬಡಕಾಜೆ, ಸುಧಾಕರ ಸಿ.ಎಚ್, ಚಂದ್ರಿಕಾ ಕೋಂಬ್ರಾಜೆ, ಮನೋಜ್ ಕುಮಾರ್ ಕುದಿಂಗಿಲ,ಜನಾರ್ದನ ಬಿ.ಎಂ, ನಾರಾಯಣ ಪಿ ಉಪಸ್ಥಿತರಿದ್ದರು. ಜ್ಞಾನಶ್ರೀ ಪ್ರಶಸ್ತಿ ಮೌಲ್ಯಮಾಪನ ಸಮಿತಿಯ ಅಧ್ಯಕ್ಷ ಡಾ.ಶ್ರೀಧರ ಏತಡ್ಕ ಸ್ವಾಗತಿಸಿ, ಪುರುಷೋತ್ತಮ ಕೋಳಾರಿ ವಂದಿಸಿದರು. ಪಿ.ಆರ್.ಸುನಿಲ್ ನಿರ್ವಹಿಸಿದರು.