ತಿರುವನಂತಪುರ: ಫ್ರೌಢಶಾಲೆಗಳು ಮತ್ತು ಹೈಯರ್ ಸೆಕೆಂಡರಿ ಶಾಲೆಗಳು ಜ.1 ರಿಂದ ಆರಂಭಗೊಂಡಿದ್ದು ಶಿಕ್ಷಕರು ಅತೀ ಹೆಚ್ಚಿನ ಜಾಗೃತ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಶಿಕ್ಷಕರಿಗೆ ಫೇಸ್ ಶೀಲ್ಡ್ ವಿತರಿಸಲು ತೀರ್ಮಾನಿಸಿದೆ.
ಇದಕ್ಕಾಗಿ ಮುಖ್ಯೋಪಾಧ್ಯಾಯರು ಮತ್ತು ಹೈಯರ್ ಸೆಕೆಂಡರಿ ಪ್ರಾಂಶುಪಾಲರಿಗೆ ಅನುಮೋದನೆ ನೀಡಲಾಗಿದೆ. ಶಾಲೆಯ ಅನುದಾನ ನಿಧಿಯನ್ನು ಬಳಸಿ ಫೇಸ್ ಶೀಲ್ಡ್ ಖರೀದಿಸಲು ಶಿಫಾರಸು ಮಾಡಲಾಗಿದೆ.
ಕಳೆದ ಹತ್ತು ತಿಂಗಳ ಅನಿಶ್ಚಿತತೆಯ ನಂತರ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗಿವೆ. ಶೇಕಡಾ 50 ರಷ್ಟು ಮಕ್ಕಳನ್ನು ಒಂದೇ ಸಮಯದಲ್ಲಿ ಶಾಲೆಗೆ ಬರುವಂತೆ ಸೂಚಿಸಲಾಗಿದೆ. ಜನವರಿಯಲ್ಲಿ ತರಗತಿ ಮತ್ತು ಫೆಬ್ರವರಿಯಲ್ಲಿ ಪುನರ್ ಮನನ(ರಿವಿಶನ್)ಪೂರ್ಣಗೊಳಿಸಿ ಮಾರ್ಚ್ 17 ರಿಂದ 10 ಮತ್ತು 12 ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.