ಪತ್ತನಂತಿಟ್ಟು: ಯಾವುದೇ ರಾಜ ಪ್ರತಿನಿಧಿ ಮತ್ತು ಗೌಜು-ಗದ್ದಲಗಳಿಲ್ಲದೆ ಶಬರಿಮಲೆ ಸನ್ನಿಧಿಗೆ ಇಂದು(ಮಂಗಳವಾರ)ತಿರುವಾಭರಣ(ದೇವರ ಪವಿತ್ರ ಆಭರಣ) ಕೊಂಡೊಯ್ಯಲಾಗುತ್ತದೆ. ಸರಳ ಮೆರವಣಿಗೆ ನಡೆಯಲಿದೆ. ಸಾವಿರಾರು ಭಕ್ತರು ಭಾಗವಹಿಸುತ್ತಿದ್ದ ಈ ಕಾರ್ಯಕ್ರಮ ಎಷ್ಟೋ ದಶಕಗಳಿಂದ ಇದೀಗ ನಿಗದಿಪಡಿಸಿದ ಸೀಮಿತ ಜನಸಂದೋಹದೊಂದಿಗೆ ನಡೆಯುತ್ತಿರುವುದು ವಿಶೇಷವಾಗಿದೆ. ಮೆರವಣಿಗೆಯಲ್ಲಿ ಪೋಲೀಸರು ಸೇರಿದಂತೆ ಗರಿಷ್ಠ 130 ಜನರು ಮಾತ್ರ ಪಾಲ್ಗೊಳ್ಳುತ್ತಾರೆ.
ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಎಲ್ಲರಿಗೂ ಕಡ್ಡಾಯವಾಗಿದೆ. ಪಂದಳಂ ಅರಮನೆಯಿಂದ ತಿರುವಾಭರಣ ಮೆರವಣಿಗೆ ಬೆಳಿಗ್ಗೆ 11.30 ಕ್ಕೆ ವಲಿಯಾಕೋಯ್ಕಲ್ ದೇವಸ್ಥಾನವನ್ನು ತಲುಪಲಿದೆ.ಅಲ್ಲಿಂದ ಮಧ್ಯಾಹ್ನ 1 ಗಂಟೆಗೆ ಹೊರಡಲಿದೆ. ತಿರುವಾಭರಣ ಪೆಟ್ಟಿಗೆ ಮೊದಲೇ ಸಿದ್ಧಪಡಿಸಿದ ಸ್ಥಳಗಳಲ್ಲಿ ಇಳಿಯಲಿದ್ದರೂ ಭಕ್ತರಿಗೆ ಅದನ್ನು ನೋಡಲು ಅವಕಾಶವಿರುವುದಿಲ್ಲ.
ಮೆರವಣಿಗೆ 14 ರಂದು ಸಂಜೆ ಶಬರಿಮಲೆ ಸನ್ನಿಧಿ ತಲುಪಲಿದೆ.ಪೋಲೀಸರಲ್ಲದೆ, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.