ಕಣ್ಣೂರು: ಮಲೆಯಾಳ ಚಲನಚಿತ್ರದ ಹಿರಿಯಜ್ಜ, ನಟ ಉನ್ನಿಕೃಷ್ಣನ್ ನಂಬೂದಿರಿ (98)ಬುಧವಾರ ಸಂಜೆ ನಿಧನರಾದರು. ವೃದ್ಧಾಪ್ಯ ಮತ್ತು ಸಹಜ ಅನಾರೋಗ್ಯದಿಂದ ಕಳೆದೊಂದು ದಶಕದಿಂದ ಅವರು ಚಿತ್ರರಂಗದಿಂದ ದೂರವಿರುತ್ತಿದ್ದರು.
ನಿನ್ನೆಯಷ್ಟೇ ಇವರಿಗೆ ನಡೆಸಿದ್ದ ಕೋವಿಡ್ ನಕಾರಾತ್ಮಕವಾಗಿತ್ತು. ಖ್ಯಾತ ನಿರ್ದೇಶಕ ಕ್ಯೆದಪ್ರಂ ದಾಮೋದರನ್ ನಂಬೂದಿರಿಯವರ ಮಾವ(ಪತ್ನಿಯ ತಂದೆ) ಇವರಾಗಿದ್ದು ದೇಶಿಕಾನಂ ಮತ್ತು ಕಲ್ಯಾಣರಾಮನ್ ಮುಂತಾದ ಅನೇಕ ಚಿತ್ರಗಳಲ್ಲಿ ಅಜ್ಜನ ಪಾತ್ರವನ್ನು ನಿರ್ವಹಿಸಿದ ನಟ ಉನ್ನಿಕೃಷ್ಣನ್.
ನ್ಯುಮೋನಿಯಾ ಹಿನ್ನೆಲೆಯಲ್ಲಿ ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದಾಗ ಕೋವಿಡ್ ಧನಾತ್ಮಕವಾಗಿತ್ತು. ಉನ್ನಿಕೃಷ್ಣನ್ ಕೆಲವು ದಿನಗಳ ಚಿಕಿತ್ಸೆಯ ನಂತರ ಎರಡು ದಿನಗಳ ಹಿಂದೆ ಕೋವಿಡ್‌ನಿಂದ ಮುಕ್ತರಾಗಿ ಮರಳಿದ್ದರು. ಅವರ ಪುತ್ರ ಭವದಾಸನ್ ಅವರೇ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಮೂರು ವಾರಗಳ ಹಿಂದೆ ನ್ಯುಮೋನಿಯಾ ಪೀಡಿತರಾಗಿ ಕಣ್ಣೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆ ದಿನ ಪರೀಕ್ಷೆಯಲ್ಲಿ, ಕೋವಿಡ್ ಫಲಿತಾಂಶವು ನಕಾರಾತ್ಮಕವಾಗಿತ್ತು, ಆದರೆ ನ್ಯುಮೋನಿಯಾದಿಂದ ಮನೆಗೆ ಮರಳಿದ ನಂತರ, ಮತ್ತೆ ಜ್ವರ ಉಲ್ಬಣಗೊಂಡಿತು. ಈ ವೇಳೆ ಮತ್ತೆ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ಧನಾತ್ಮಕವಾಯಿತು.
ಎರಡು ದಿನಗಳ ಕಾಲ ಐಸಿಯುನಲ್ಲಿದ್ದ ನಟ ಸಾರ್ವಭೌಮ ಚೇತರಿಸಿಕೊಂಡ ತರುವಾಯ ಮನೆಗೆ ಮರಳಿದ್ದರು.