ಕಾಸರಗೋಡು: ಪಡಿತರ ಸಾಮಾಗ್ರಿಗಳ ಅಳತೆ, ಗುಣಮಟ್ಟದಲ್ಲಿ ಲೋಪಗಳಿದ್ದಲ್ಲಿ ಜಿಲ್ಲಾ ದೂರು ಪರಿಹಾರ ಅಧಿಕಾರಿಗೆ ದೂರು ಸಲ್ಲಿಸಬಹುದು. ಹೆಚ್ಚುವರಿ ದಂಡನಧಿಕಾರಿ ಜಿಲ್ಲಾ ದೂರು ಪರಿಹಾರ ಅಧಿಕಾರಿಯ ಹೊಣೆ ಹೊಂದಿದ್ದಾರೆ. ಇವರ ಆದೇಶದಲ್ಲಿ ಆಕ್ಷೇಪಗಳಿದ್ದಲ್ಲಿ ದೂರುಗಳನ್ನು ರಾಜ್ಯ ಆಹಾರ ಆಯೋಗ ಕಮೀಷನ್ ಗೆ ಸಲ್ಲಿಸಬಹುದು. ಮೆಂಬರ್ ಸಎಕ್ರಟರಿ, ರಾಜ್ಯ ಆಹಾರ ಆಯೋಗ, ಲೀಗಲ್ದ್ ಮೆಟ್ರಾಲಜಿ ಭವನ್, ವೃದಾವನ್ ಗಾರ್ಡನ್ಸ್, ಪಟ್ಟಂ ಪಾಲೆಟ್ ಪಿ.ಒ., ತಿರುವನಂತಪುರಂ, 695004 ಎಂಬ ವಿಳಾಸಕ್ಕೆ ಸಲ್ಲಿಸಬಹುದು. ದೂರವಾಣಿ ಸಂಖ್ಯೆ: 0471 2965398. ಈ-ಮೇಲ್: sfcommissionkerala@gmail.com