HEALTH TIPS

'ಕೇರಳದಲ್ಲಿ ಯುಡಿಎಫ್ ತರಂಗ ಸೃಷ್ಟಿಸಬೇಕು-ವಿಜಯವಲ್ಲ'; ಯುಡಿಎಫ್ ಕೇರಳವನ್ನು ಗುಡಿಸಲಿದೆ-ರಾಹುಲ್ ಗಾಂಧಿ

                  

         ಮಲಪ್ಪುರಂ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಯುಡಿಎಫ್ ತರಂಗ ಸೃಷ್ಟಿಸಲಿದೆ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಯುಡಿಎಫ್ ಗೆಲ್ಲಲು ಬಯಸುವುದಿಲ್ಲ, ಅದು ಅಲೆಗಳನ್ನು ಸೃಷ್ಟಿಸಲು ಬಯಸುತ್ತದೆ. ಕೇರಳದಲ್ಲಿ ಎಡಪಂಥೀಯರು ಏನು ಮಾಡುತ್ತಿದ್ದಾರೆಂದು ಜನರಿಗೆ ತಿಳಿದಿದೆ ಎಮದರು. ನೀಲಂಬೂರು ಕ್ಷೇತ್ರದಲ್ಲಿ ನಡೆದ ಯುಡಿಎಫ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಣಾಳಿಕೆ ತಯಾರಿಕೆಯಲ್ಲಿ ಈ ಬಗ್ಗೆ ಗಮನಿಸಲು ಸೂಚಿಸಿದರು.

         ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿರ್ಧರಿಸುವ ಸಾಂಪ್ರದಾಯಿಕ ವಿಧಾನವನ್ನು ಬದಲಾಯಿಸಬೇಕು. ಯುವಕರಿಗೆ ಅವಕಾಶಗಳನ್ನು ನೀಡಬೇಕು. ವಂಡೂರಿನಲ್ಲಿ ನಡೆದ ಯುಡಿಎಫ್ ಸಮಾವೇಶದಲ್ಲಿ ರಾಹುಲ್ ಗಾಂಧಿ ರೈತರು ಮತ್ತು ಯುವಕರನ್ನು ತಲುಪಲು ಪ್ರಣಾಳಿಕೆ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು.


        ನಿನ್ನೆ ಬೆಳಿಗ್ಗೆ 11.30 ಕ್ಕೆ ರಾಹುಲ್ ಗಾಂಧಿ ದೆಹಲಿಯಿಂದ ಕರಿಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ನಂತರ ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅವರು ವಂಡೂರ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿರ್ಮಿಸಿದ ತರಗತಿ ಕೊಠಡಿಗಳನ್ನು ಉದ್ಘಾಟಿಸಿದರು. 5 ಶಾಲಾ ಬಸ್‍ಗಳ ಫ್ಲ್ಯಾಗ್ ಆನ್ ಸಮಾರಂಭವೂ ನಡೆಯಿತು. ರಾಹುಲ್ ಗಾಂಧಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ  ಯುಡಿಎಫ್ ಸದಸ್ಯರು ಮತ್ತು ವಂಡೂರು ಮತ್ತು ನೀಲಂಬೂರು ಕ್ಷೇತ್ರಗಳ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ನಿಲಾಂಬೂರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರು ಪೆÇೀರ್ಟಬಲ್ ವೆಂಟಿಲೇಟರ್ ನ್ನು ನಿಲಾಂಬೂರ್ ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಿದರು ಮತ್ತು ಉಚಿತ ಮನೆಗಳ ಕೀಲಿ ಕೈ ಹಸ್ತಾಂತರಿಸಿದರು.  


        ಮಲಪ್ಪುರಂ ಜಿಲ್ಲೆಯ ಭೇಟಿಯನ್ನು ಮುಕ್ತಾಯಗೊಳಿಸಿದ ನಂತರ, ರಾಹುಲ್ ಗಾಂಧಿ ಕಳಮಸೇರಿ ಪಾಸ್ ಮೂಲಕ ರಸ್ತೆ ಮೂಲಕ ನೀಲಾಂಬೂರಿನಿಂದ ವಯನಾಡಿಗೆ  ತೆರಳಿದರು. ರಾಹುಲ್ ಗಾಂಧಿ ನಿನ್ನೆ ರಾತ್ರಿ ವಯನಾಡ್ ಆಗಮಿಸಿ ಅತಿಥಿ ಗೃಹದಲ್ಲಿ ತಂಗಿದರು. ಇಂದು ಬೆಳಿಗ್ಗೆ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಕಣ್ಣೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ರಾಹುಲ್ ದೆಹಲಿಗೆ ಮರಳಲಿದ್ದಾರೆ.




    


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries