ತಿರುವನಂತಪುರ: ಕೊಲ್ಲಂನಲ್ಲಿ ಲಾಟರಿ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ 46 ವರ್ಷದ ವ್ಯಕ್ತಿಯೊಬ್ಬ ಈಗ ಕೋಟ್ಯಧಿಪತಿಯಾಗಿದ್ದಾರೆ. ಬಿಕರಿಯಾಗದೇ ಉಳಿದಿದ್ದ ಟಿಕೆಟ್‌ನಿಂದಾಗಿ ಅವರ ಅದೃಷ್ಟವೇ ಬದಲಾಗಿದೆ.
ಕೇರಳ ಸರ್ಕಾರದ ಕ್ರಿಸ್‌ಮಸ್-ಹೊಸ ವರ್ಷದ ಬಂಪರ್ ಲಾಟರಿಯಲ್ಲಿ ಆ ವ್ಯಕ್ತಿಯ ಬಳಿ ಇದ್ದ ಟಿಕೆಟ್‌ಗೆ 12 ಕೋಟಿ ಬಹುಮಾನ ಲಭಿಸಿದೆ. ಕೊಲ್ಲಂ ಜಿಲ್ಲೆಯ ಆರ್ಯಂಕವು ಸಮೀಪದ ಇರವಿಧರ್ಮಾಪುರಂನ ನಿವಾಸಿಯಾಗಿರುವ ಸರ್ಫರುದ್ದೀನ್, ಬಹುಮಾನ ಪಡೆದ ಅದೃಷ್ಟಶಾಲಿ.
ಮಂಗಳವಾರ ಲಾಟರಿ ನಿರ್ದೇಶನಾಲಯದ ಕಚೇರಿಗೆ ಭೇಟಿ ನೀಡಿದ್ದ ಸರ್ಫರುದ್ದೀನ್, ತಮ್ಮ ಬಳಿ ಇದ್ದ ಲಾಟರಿ ಟಿಕೆಟ್ ಅನ್ನು ಅವರಿಗೆ ಒಪ್ಪಿಸಿದ್ದಾರೆ.
ತೆರಿಗೆ ಹಾಗೂ ಏಜೆಂಟ್ ಕಮಿಷನ್ ಕಡಿತಗೊಂಡು ಅವರಿಗೆ ಒಟ್ಟು 7.5 ಕೋಟಿ ಬಹುಮಾನ ಸಿಗುತ್ತದೆ ಎಂದು ಮೂಲಗಳು ತಿಳಿಸಿವೆ.