HEALTH TIPS

ಮಧೂರು ಮಠ : ಮಹಾದ್ವಾರ ಉದ್ಘಾಟನೆ-ಸಂಪತ್ತು ಸದ್ವನಿಯೋಗವಾದಾಗ ವೃದ್ಧಿ : ಆನೆಗುಂದಿಶ್ರೀ

               

        ಕಾಸರಗೋಡು:  ಸಂಪತ್ತು ಸತ್ಕಾರ್ಯಕ್ಕೆ ಬಳಕೆಯಾದಲ್ಲಿ ಸದ್ವ್ವಿನಿಯೋಗವಾಗುವುದು.  ಸದ್ವಿನಿಯೋಗದಿಂದ ಸಂಪತ್ತು ವೃದ್ಧಿಯಾಗುವುದು.  ಇರುವ ಸಂಪತ್ತನ್ನು ಸತ್ಕಾರ್ಯಕ್ಕೆ ಬಳಸುವ ಮನಸ್ಸು ಬರಬೇಕು ಎಂದು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತÀಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

     ಅವರು ಮಧೂರು ಶ್ರೀ ಕಾಳಿಕಾಂಬಾ ಮಠದ ಮಕರ ಸಂಕ್ರಮಣೋತ್ಸವದಂದು ಮುಂಬೈಯ ಭಾರತ್ ಸರ್ಜಿಕಲ್ಸ್‍ನ ವರದಾಕ್ಷ ಕೆ. ಆಚಾರ್ಯ, ಸಹೋದರ ರಾಜೇಶ್ ಆಚಾರ್ಯ ಮತ್ತು ಮನೆಯವರು ಇವರು ತಮ್ಮ ತಂದೆ ಪೇರಾಲ್ ಕೊಗ್ಗು ಡಿ. ಆಚಾರ್ಯರ ಸ್ಮರಣಾರ್ಥ ನಿರ್ಮಿಸಿದ ಶ್ರೀಮಠದ ಮಹಾಧ್ವಾರವನ್ನು ದೀಪ ಬೆಳಗಿಸಿ ಉಧ್ಘಾಟಿಸಿದ ಬಳಿದ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.


       ಶುದ್ಧತೆ, ಪ್ರಾಮಾಣಿಕತೆ ಮತ್ತು ಪರಿಶ್ರಮಗಳನ್ನು ಮೈಗೂಡಿಕೊಂಡಾಗ ಬದುಕಿನಲ್ಲಿ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ. ಕೊರೊನ ಎನ್ನುವ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನಾವಿಂದು ಶ್ರೀಮಠದ ಮಕರಸಂಕ್ರಮಣೋತ್ಸವದಲ್ಲಿ ಭಾಗಿಗಳಾಗುವ ಆವಕಾಶವನ್ನು ತಾಯಿ ಕಾಳಿಕಾಂಬೆ ನೀಡಿದ್ದಾಳೆ ಎಂದು ಸೇರಿದÀ ಶಿಷ್ಯ ಸಮೂಹಕ್ಕೆ ಆಶೀರ್ವದಿಸುತ್ತಾ ನುಡಿದರು.

ಇದೇ ಸಂದರ್ಭದಲ್ಲಿ ಶ್ರೀಮಠದ ಶ್ರೀ ಕಾಳಿಕಾಂಬಾ ಮಹಿಳಾ ವೃಂದದವರು ನಿರ್ಮಿಸಿದ ಶಾಶ್ವತ ಚಪ್ಪರವನ್ನು ಶ್ರೀಗಳು ದೀಪ ಬೆಳಗಿಸಿ ಉಧ್ಘಾಟಿಸಿದರು. ಮುಂಬೈ ವರದಾಕ್ಷ ಕೆ. ಆಚಾರ್ಯ ಮತ್ತು ಸಹೋದರ ರಾಜೇಶ್ ಆಚಾರ್ಯ, ಕಾಳಿಕಾಂಬಾ ಮಹಿಳಾ ವೃಂದ, ಮಹಾಧ್ವಾರದ ಶಿಲ್ಪಿ  ಮಹೇಶ್ ಆಚಾರ್ಯ ಬಾಯಾರು ಮತ್ತು ಕಟೀಲು 1ನೇ ಮೇಳದ ಯುವ ಯಕ್ಷಗಾನ ಕಲಾವಿದ  ಪವನ್‍ಕುಮಾರ್ ಆಚಾರ್ಯ ನೀರ್ಚಾಲು ಇವರನ್ನು ಶಾಲು, ಸ್ಮರಣಿಕೆ ಮತ್ತು ಫಲವಸ್ತುಗಳನ್ನಿತ್ತು ಗೌರವಿಸಲಾಯಿತು. ದಾನಿ ವೇದಶ್ರೀ ಪದ್ಮನಾಭ ಶರ್ಮ ಚಿತ್ರಕೂಟ ಇವರಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು.

    ಮಹಾಧ್ವಾರದ ಉಧ್ಘಾಟನೆಯಲ್ಲಿ ಉಪಸ್ಥಿತರಿದ್ದ ಮಧೂರು  ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ  ಗೋಪಾಲಕೃಷ್ಣ ಕೂಡ್ಲು ಮತ್ತು ಉಪಾಧ್ಯಕ್ಷೆ ಹಾಗೂ ಮಧೂರು 5ನೇ ವಾರ್ಡ್ ಕೌನ್ಸಿಲರ್ ಸ್ಮಿಜವಿನೋದ್ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.   ಸಭೆಯ ಅಧ್ಯಕ್ಷತೆಯನ್ನು ಶ್ರೀಮಠದ ಅಧ್ಯಕ್ಷ ಎನ್. ಪರಮೇಶ್ವರ ಆಚಾರ್ಯ ನೀರ್ಚಾಲು ವಹಿಸಿದರು.  ಮಹಿಳಾ ವೃಂದದ ಅಧ್ಯಕ್ಷೆ ಶ್ರೀಮತಿ ಕನಕ ಪ್ರಭಾಕರ ಆಚಾರ್ಯ, ಯುವಕ ಸಂಘದ ಅಧ್ಯಕ್ಷ ಮಹೇಶ್ ಆಚಾರ್ಯ ಮಧೂರು, ಭಜನಾ ಸಂಘದ ಆಧ್ಯಕ್ಷ ಅಡ್ಕ ಪದ್ಮನಾಭ ಆಚಾರ್ಯ, ವೇದಶ್ರೀ ಪದ್ಮನಾಭ ಶರ್ಮ ಚಿತ್ರಮೂಲ, ಮುಂಬೈ ವರದಾಕ್ಷ ಕೆ. ಆಚಾರ್ಯ ಮತ್ತು ರಾಜೇಶ್.ಕೆ. ಆಚಾರ್ಯ ವೇಧಿಕೆಯಲ್ಲಿ ಉಪಸ್ಥಿತರಿದ್ದರು. ಅಮೈ ವೆಂಕಟ್ರಮಣ ಆಚಾರ್ಯ ಮತ್ತು ಪುತ್ರ ಅಮೈ ಗಣೇಶ್ ಆಚಾರ್ಯ ಇವರು ಗುರುವರ್ಯರ ಛಾಯಚಿತ್ರವನ್ನು ಶ್ರೀಗುರುವರ್ಯರ ಸಮ್ಮುಖದಲ್ಲಿ ಶ್ರೀಮಠದ ಅಧ್ಯಕ್ಷರೀಗೆ ಸಮರ್ಪಿಸಿದರು.


      ಶ್ರೀ ನಾಗಧರ್ಮೇಂದ್ರ ಸ್ವಾಮಿ ಸಂಸ್ಕøತ ವೇದ ಸಂಜೀವಿನೀ ಪಾಠ ಶಾಲೆಯ ವಟುಗಳಿಂದ ವೇದ ಘೋಷವು ನಡೆಯಿತು. ಶ್ರೀಮಠದ ಉಪಾಧ್ಯಕ್ಷ ವೈ. ಧರ್ಮೇಂದ್ರ ಆಚಾರ್ಯ ಮಧೂರು ಸ್ವಾಗತಿಸಿದರು. ಧಾನಿಗಳ, ಶಿಲ್ಪಿಗಳ ಮತ್ತು ಕಲಾವಿದನ ಪರಿಚಯವನ್ನು ಉಪಾಧ್ಯಕ್ಷ ಕೆ. ಪ್ರಭಾಕರ ಆಚಾರ್ಯ ಕೋಟೆಕ್ಕಾರು ಮಾಡಿದರು. ಉಪಾಧ್ಯಕ್ಷ ಕೆ. ಜಗದೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ನೆಕ್ರಾಜೆ ಪುರುಷೋತ್ತಮ ಆಚಾರ್ಯ ವಂದನೆಯನ್ನು ಸಲ್ಲಿಸಿದರು.

  ಶ್ರೀಮತ್  ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್.ಎಂ.ಬಿ. ಆಚಾರ್ ಕಂಬಾರು, ಸಮಾಜದ ಹಿರಿಯ ಸೇವಕರಾದ ಎಂ. ಪುರುಷೋತ್ತಮ ಆಚಾರ್ಯ ಕಂಬಾರು, ನಲ್ಕ ರಾಮಚಂದ್ರ ಆಚಾರ್ಯ, ಮಾಯಿಪ್ಪಾಡಿ ತುಕಾರಾಮ ಆಚಾರ್ಯ, ನಲ್ಕ ಹರೀಶ್ಚಂದ್ರ ಆಚಾರ್ಯ, ಮಾಕೂರು ಮೋಹನ ಆಚಾರ್ಯ, ವಿಷ್ಣು ಆಚಾರ್ಯ ವಿವೇಕಾನಂದನಗರ, ಬಿ. ಜನಾರ್ಧನ ಆಚಾರ್ಯ ಕೂಡ್ಲು, ಕೊಲ್ಯ ಜನಾರ್ಧನ ಆಚಾರ್ಯ, ಜಿ.ಕೆ. ಆಚಾರ್ಯ ಪುತ್ತೂರು, ಕೆ. ರಾಘವ ಆಚಾರ್ಯ ಕಾಸರಗೋಡು, ಪುತ್ತಿಗೆ ರಾಘವ ಆಚಾರ್ಯ, ರವೀಂದ್ರ ಆಚಾರ್ಯ ಮುಳ್ಳೇರಿಯ, ಕೋಟ ಗಣೇಶ ಆಚಾರ್ಯ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂತ್ಯ ಸಮಿತಿಯ ಸದಸ್ಯರು, ಮಹಿಳಾ ಸಂಘ, ಯುವಕ ಸಂಘ ಮತ್ತು ಭಜನಾ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದಕ್ಕೆ ಪೂರ್ವದಲ್ಲಿ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತವನ್ನು ನೀಡಲಾಯಿತು.  ಬಳಿದ ಶ್ರೀಮಠದ ವತಿಯಿಂದ ಪಾದಪೂಜೆಯು ಜರಗಿತು.  ಅಂದು ಪೂರ್ವಾಹ್ನ ಸ್ವಸ್ತಿ ಪುಣ್ಯಾಹ, ನವಗ್ರಹ ಪೂಜೆ, ಗಣಪತಿ ಹವನ ಪೂರ್ಣಲಂಕಾರ ಮಹಾಪೂಜೆಯ ಬಳಿಕ ಸಮಾಜ ಬಾಂಧವರಿಂದ ತಲೆಪೈಸೆ ಸಮರ್ಪಣೆ ಮತ್ತು ಬಲಿವಾಡು ಕೂಟವು ಯಶಸ್ವಿಯಾಗಿ ವರ್ಷಂಪ್ರತಿಯಂತೆ ಜರಗಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries