ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಇಂದು ಕೋವಿಡ್ ವಿತರಣೆ ಆರಂಭವಾಗಿದೆ. ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ನೀಲೇಶ್ವರ ತಾಲ್ಲೂಕು ಆಸ್ಪತ್ರೆ ಮಕ್ಕಳ ವೈದ್ಯ ಡಾ. ವಿ ಸುರೇಶನ್ ಮೊದಲ ಡೋಸ್ ಪಡೆದರು. ನಂತರ ಜಿಲ್ಲಾ ವೈದ್ಯಾಧಿಕಾರಿ ಡಾ. ಎಂ.ವಿ.ರಾಮದಾಸ್, ಉಪ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಟಿ.ಮನೋಜ್, ಕಾಞಂಗಾಡ್ ತಾಲ್ಲೂಕು ಆಸ್ಪತ್ರೆ ಅಧೀಕ್ಷಕ ಡಾ. ಪ್ರಕಾಶ್ ಕೆ.ವಿ. ಕೂಡ ಲಸಿಕೆ ಪಡೆದರು.
ವ್ಯಾಕ್ಸಿನೇಷನ್ ನೋವುರಹಿತ ಮತ್ತು ಸುರಕ್ಷಿತವಾಗಿದೆ ಮತ್ತು ವ್ಯಾಕ್ಸಿನೇಷನ್ ಮಾಡಿದ ನಂತರ ಜಿಲ್ಲೆಯಲ್ಲಿ ಯಾವುದೇ ಗಂಭೀರ ಅಡ್ಡಪರಿಣಾಮಗಳು ವರದಿಯಾಗಿಲ್ಲ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯ ಇತರ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಇಂದು ಲಸಿಕೆಗಳನ್ನು ಸಹ ನಡೆಸಲಾಯಿತು.
ಉಕ್ಕಿನಡ್ಕ ವೈದ್ಯಕೀಯ ಕಾಲೇಜಿನಲ್ಲಿ ಡಾ. ಆದರ್ಶ್, ನೀಲೇಶ್ವರ ತಾಲ್ಲೂಕು ಆಸ್ಪತ್ರೆಯ ಅಧೀಕ್ಷಕ ಡಾ.ಸಿ.ಸುಕು, ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಸೌಮ್ಯ, ಬಂದಡ್ಕ ಆಸ್ಪತ್ರೆಯಲ್ಲಿ ಡಾ.ಅಭಿಷೇಕ್ ಚಂದ್ರನ್,ಪೆರಿಯದಲ್ಲಿ ಸಾಮೂಹಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ.ರಾಜ್ ಮೋಹನ್, ಎಣ್ಣಪ್ಪಾರ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆ ದಿಜಿ ಎಂಬವರು ಲಸಿಕೆ ವಿತರಣೆಗೆ ಚಾಲನೆ ನೀಡಿದರು.