ಮುಳ್ಳೇರಿಯಾದಲ್ಲಿ ಅಖಿಲ ಕೇರಳ ಯಾದವ ಸಭಾ ನಗದು ಪುರಸ್ಕಾರ ವಿತರಣೆ
0
ಜನವರಿ 02, 2021
ಮುಳ್ಳೇರಿಯ: ಅಖಿಲ ಕೇರಳಯಾದವ ಸಭಾ ಕಾಸರಗೋಡು ತಾಲೂಕು ಸಮಿತಿ ಹಾಗೂ ಯುಎಇ ಸಾರಥಿ-ಕೃಷ್ಣ ಗಾಥಾ ಪ್ರತಿಭಾ ಪುರಸ್ಕಾರ ವಿತರಣೆಯು ಮುಳ್ಳೇರಿಯ ಯಾದವ ಸಭಾ ಭವನದಲ್ಲಿ ನಡೆಯಿತು.
ಯಾದವ ಸಭಾ ತಾಲೂಕು ಅಧ್ಯಕ್ಷ ನಾರಾಯಣ ಎಂ. ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಯಾದವ ಸಭಾ ರಾಜ್ಯ ಸಮಿತಿ ಕಾರ್ಯದರ್ಶಿ ದಾಮೋದರ ಕರ್ಮಂತೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಯುಎಇ ಸಾರಥಿ ಇದರ ಸ್ಪೋಟ್ಸ್ ಸಂಚಾಲಕ ಸುಕುಮಾರ ಕಲಕ್ಕರ ಉಪಸ್ಥಿತರಿದ್ದು ನಗದು ಪುರಸ್ಕಾರ ವಿತರಿಸಿದರು.
ಕಾರ್ಯಕ್ರಮದಲ್ಲಿ ಯಾದವ ಸಮುದಾಯ ತಾಲೂಕಿನ ಎಲ್ಲಾ ಪ್ರಾದೇಶಿಕ ಸಮಿತಿಗಳಿಂದ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ 12 ವಿದ್ಯಾರ್ಥಿಗಳಿಗೆ ನಗದು ಹಾಗೂ ಫಲಕ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅಖಿಲ ಕೇರಳ ಯಾದವ ಸಭಾ ರಾಜ್ಯ ಉಪಾಧ್ಯಕ್ಷ ಉದಯ ಕುಮಾರ್ ಬದಿಯಡ್ಕ, ಸದಸ್ಯರಾದ ಶಿವಪ್ರಸಾದ್ ಕಡಾರ್, ರಾಜೇಶ್ ಎಲ್ಲಂಗಳ, ತಾಲೂಕು ಉಪಾಧ್ಯಕ್ಷ ಸೀತಾರಾಮ ಕೂಟ್ಲುಂಗಾಲ್, ಮಹಿಳಾ ಸಮಿತಿ ಕಾರ್ಯದರ್ಶಿ ಅನಿತಾ ಟೀಚರ್, ಯೂತ್ ಸಮಿತಿ ಅಧ್ಯಕ್ಷ ಗಂಗಾಧರ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು. ಪುರಸ್ಕಾರ ಪಡೆದ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ನಾರಾಯಣ ಮಣಿಯಾಣಿ ಸ್ವಾಗತಿಸಿ, ರಾಧಾಕೃಷ್ಣನ್ ಕಾಸರಗೋಡು ವಂದಿಸಿದರು. ಗಣೇಶ್ ನೀರ್ಚಾಲು ಕಾರ್ಯಕ್ರಮ ನಿರೂಪಿಸಿದರು.
Tags