ಕಾಸರಗೋಡು: ಕೋವಿಡ್ ಮಾನದಂಡ ಪಾಲನೆಯೊಂದಿಗೆ ಮಾತ್ರ ಜಿಲ್ಲೆಯಲ್ಲಿ ಗಣರಾಜ್ಯೋತ್ಸ ದಿನವನ್ನು ಆಚರಿಸಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ತಿಳಿಸಿದ್ದಾರೆ. ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗರಿಷ್ಠ ನೂರು ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರಿಗೆ ಪಾಲ್ಗೊಳ್ಳಲು ಅನುಮತಿ ನಿರಾಕರಿಸಲಾಗಿದೆ.
ಸಮಾರಂಭದಲ್ಲಿ ಧ್ವಜವಂದನೆ ನಡೆಯಲಿದ್ದು, ಮಾರ್ಚ್‍ಪಾಸ್ಟ್ ಕೈಬಿಡಲಾಗಿದೆ. ಎಳೆಯ ಮಕ್ಕಳು ಹಾಗೂ ವೃದ್ಧರು ಸಮಾರಂಭದಲ್ಲಿ ಪಾಲ್ಗೊಳ್ಳದಿರುವಂತೆ ಸೂಚಿಸಲಾಗಿದೆ. ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಅತಿಥಿಗಳನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸುವುದರ ಜತೆಗೆ ವೇದಿಕೆಯಲ್ಲಿ ಅಗತ್ಯ ಮಾಸ್ಕ್, ಸಾನಿಟೈಸರ್ ಇರಿಸುವಂತೆಯೂ ಸೂಚಿಸಲಾಗಿದೆ.