ಕೊಚ್ಚಿ:ರಾಷ್ಟ್ರಾದ್ಯಂತ ಸಮಚಲನ ಸೃಷ್ಟಿಸಿದ್ದ ಸಿಸ್ಟರ್. ಅಭಯ ಕೊಲೆ ಪ್ರಕರಣದ ಮೊದಲ ಆರೋಪಿ ಫಾದರ್. ಥಾಮಸ್ ಕೊಟ್ಟೂರು ಕೇರಳ ಹೈಕೋರ್ಟ್‍ನಲ್ಲಿ ತನಗೆ ನೀಡಲಾದ ಜೀವಾವಧಿ ಶಿಕ್ಷೆಯ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ನಿರ್ಣಾಯಕ ಸಾಕ್ಷಿಯಾದ ಅಡಕ್ಕ ರಾಜು ಎಂಬವನ ಸಾಕ್ಷ್ಯ ನಂಬಿಕೆಗೆ ಅರ್ಹವಲ್ಲ ಎಂದು ಸಿಬಿಐ ತೀರ್ಪಿನ ವಿರುದ್ಧ ಪಾದ್ರಿ ಹೈಕೋರ್ಟ್ ನ್ನು ಸಂಪರ್ಕಿಸಿರುವರು. ಫಾದರ್.ಥಾಮಸ್ ಕೊಟ್ಟೂರು ವಿಗೆ ಡಿಸೆಂಬರ್ ನಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಕೊಟ್ಟಾಯಂನ ಪಿಯಾಸ್ಟ್ ಚರ್ಚೆ ನಲ್ಲಿ ಸಿಸ್ಟರ್ ಅಭಯಳನ್ನು 1992ರ ಮಾ.27 ರಂದು ಮೃತರಾದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಸುಧೀರ್ಘ ಅವಧಿಯ ತನಿಖೆಯ ಬಳಿಕ ಸಿಬಿಐ ನ್ಯಾಯಾಲಯವು ಈ ಪ್ರಕರಣದಲ್ಲಿ ಮೊದಲ ಆರೋಪಿ ಫಾದರ್. ಥಾಮಸ್ ಕೊಟ್ಟೂರ್, ಮೂರನೇ ಆರೋಪಿ ಸಿಸ್ಟರ್.ಸೆಫಿ ಎಂದು ಗುರುತಿಸಿ ತೀರ್ಪು ನೀಡಿತ್ತು. ಫಾದರ್. ಕೊಟ್ಟೂರು ಹಾಗೂ ಸಿಸ್ಟರ್.ಸೆಫಿ ಅಭಯಾಳನ್ನು ಕೊಡಲಿಯಿಂದ ತಲೆಗೆ ಹೊಡೆದು ಕೊಂದು ಬಳಿಕ ಚರ್ಚ್ ನ ಹಿಂದಿನ ಬಾವಿಗೆ ಎಸೆದು ಇದೊಂದು ಆತ್ಮಹತ್ಯೆಯೆಂದು ಬಿಂಬಿಸಲು ಯತ್ನಿಸಿದ್ದರು. ಹಲವು ವರ್ಷಗಳ ತನಿಖೆ ಮತ್ತು ವಿಚಾರಣೆಯ ನಂತರ, ತಪ್ಪಿತಸ್ಥರೆಂದು ಸಾಬೀತಾದ ನಂತರ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇದಕ್ಕೆ ಪ್ರಮುಖವಾದುದು ರಾಜು ಅಲಿಯಾಸ್ ಅಡಕ್ಕ ರಾಜು ಎಂಬ ಪಕ್ಕಾ ಕಳ್ಳನೊಬ್ಬನ ಸಾಕ್ಷಿಯಾಗಿದೆ.
ಈ ಪ್ರಕರಣದಲ್ಲಿ ಥಾಮಸ್ ಕೊಟ್ಟೂರ್ ಭಾಗಿಯಾಗಿದ್ದರೆಂಬುದಕ್ಕೆ ಸಾಕ್ಷ್ಯವು ನಿರ್ಣಾಯಕವಾಗಿದೆ. ಬೆಳಿಗ್ಗೆ 4.15 ರಿಂದ ಸಂಜೆ 5 ರ ನಡುವೆ ಅಭಯಳನ್ನು ಕೊಲ್ಲಲಾಗಿದೆ ಎಂದು ನ್ಯಾಯಾಲಯವು ಗುರುತಿಸಿದೆ. ಚರ್ಚ್ ಪಾದ್ರಿಗಳ ಲೈಂಗಿಕ ಚಟುವಟಿಕೆಗಳನ್ನು ಕಂಡಿದ್ದ ಸಿಸ್ಟರ್ ಅಭಯಳಿಂದ ವಿಷಯ ಸೋರಿಕೆಯಾಗದಂತೆ ತಡೆಯಲು ಈ ಕೊಲೆ ಮಾಡಲಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಘಟನೆ ನಡೆದ ದಿನ, ಫಾದರ್. ಕೊಟ್ಟೂರು ಅವರ ಸ್ಕೂಟರ್ ನ್ನು ನೋಡಿರುವುದಾಗಿ ನೀಡಿದ ಸಾಕ್ಷ್ಯಕ್ಕೆ ಕೊಟ್ಟೂರು ಅವರಿಗೆ ಸ್ಪಷ್ಟ ವಿವರಣೆಯನ್ನು ನೀಡಲು ಸಾಧ್ಯವಾಗದಿರುವುದು ಸಿಬಿಐ ನ್ಯಾಯಾಲಯದ ಈಗಿನ ತೀರ್ಪಿಗೆ ಪ್ರಮುಖ ತಿರುವಾಗಿತ್ತು.