ಮುಳ್ಳೇರಿಯ: ಕಾರಡ್ಕ ಬ್ಲಾಕ್ ಪಂಚಾಯತಿ ಸ್ಥಾಯೀ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆ. ರಮಣಿ, ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಬಿ.ಕೆ.ನಾರಾಯಣನ್, ಕಲ್ಯಾಣ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಸ್ಮಿತಾ ಪ್ರಿಯರಂಜನ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಪಿ. ಸವಿತಾ ಅವರನ್ನು ಆಯ್ಕೆ ಮಾಡಲಾಯಿತು. ಚುನಾವಣೆಯ ನೇತೃತ್ವವನ್ನು ಬ್ಲಾಕ್ ಪಂಚಾಯತಿ ರಿಟನಿರ್ಂಗ್ ಅಧಿಕಾರಿ, ಸಮೀಕ್ಷೆ ಮತ್ತು ಭೂ ದಾಖಲೆಗಳ ಉಪನಿರ್ದೇಶಕ ಕೆ.ಕೆ.ಸುನೀಲ್ ವಹಿಸಿದ್ದರು.