HEALTH TIPS

ಉಪ್ಪಳದಲ್ಲಿ ರಚನಾ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನೆ

        ಉಪ್ಪಳ : ಉಪ್ಪಳ ಹೃದಯ ಭಾಗದಲ್ಲಿರುವ "ರಚನಾ ಸಾಂಸ್ಕøತಿಕ ಕಲಾ ಸಂಸ್ಥೆ ಉಪ್ಪಳ"ದ ಆಶ್ರಯದಲ್ಲಿ ಹಿರಿಯ ಯಕ್ಷಗಾನ ಗುರು ರಾಮ ಸಾಲ್ಯಾನ್ ಮಂಗಲ್ಪಾಡಿ ಇವರು ನಡೆಸಿಕೊಡುವ ಯಕ್ಷಗಾನ ನಾಟ್ಯ ಹಾಗೂ ಭಾಗವತಿಕೆ ಕಲಿಕೆಯ "ರಚನಾ ಯಕ್ಷಗಾನ ತರಬೇತಿ ಕೇಂದ್ರ"ವನ್ನು ಇತ್ತೀಚೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಉದ್ಘಾಟಿಸಿದರು. 

     ಈ ಸಂದರ್ಭ ಮಾತನಾಡಿದ ಯೋಗೀಶ ರಾವ್ ಅವರು, ಯಕ್ಷಗಾನ ಕ್ಷೇತ್ರಕ್ಕೆ ಉಪ್ಪಳ ಹಾಗೂ ಪರಿಸರದ ಕೊಡುಗೆ ದೊಡ್ಡದು ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಯಕ್ಷಗಾನ ತರಬೇತಿಗಳನ್ನು ನಡೆಸಿಕೊಂಡು ಬಂದ, ಕರ್ನಾಟಕ ಮಂತ್ರಿ ಶಾಸಕರಿಗೂ  ನಾಟ್ಯ ತರಬೇತಿ ನೀಡಿದ ಹಿರಿಯ ಯಕ್ಷಗಾನ ಗುರುಗಳಾದ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ದಿ.ಉಪ್ಪಳ ಕೃಷ್ಣ ಮಾಸ್ತರ್, ದಿ. ಶೇಷಪ್ಪ ಕುಂಬಳೆ ಯವರು ಇತ್ತೀಚೆಗಿನ ವರೆಗೆ  ನಡೆಸಿಕೊಂಡು ಬಂದ ಉಪ್ಪಳ ಭಗವತಿ ಮೇಳ, ಕುಬಣೂರು ಬಾಲಕೃಷ್ಣರಾವ್, ಕುಬಣೂರು ಶ್ರೀಧರ ರಾವ್, ಬೇಕೂರು ಕೇಶವ, ತಿಂಬ್ರ ಗೋಪಾಲಕೃಷ್ಣ ಮಯ್ಯ, ಮಂಗಲ್ಪಾಡಿ ಮಹಾಬಲ ಶೆಟ್ಟಿ ಹೀಗೆ ಅನೇಕ ಹಿರಿಯರು ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕಾಣ್ಕೆ ಯನ್ನು ನೀಡಿದ್ದಾರೆ, ಉಪ್ಪಳ ಐಲ ಮೈದಾನ ಟೆಂಟ್ ಆಟಗಳ ಗಲ್ಲಾ ಬೆಟ್ಟಿಗೆ ತುಂಬಿಸುತ್ತಿದ್ದ ಅತೀ ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಕ್ಷೇತ್ರ ಎಂದು ನೆನಪಿಸಿ ಕೊಂಡರು. ಸಾಧಕರಿಗೆ ಮಾತ್ರ ಕಲೆ ಸಿದ್ದಿಸುತ್ತದೆ ಶ್ರದ್ಧೆ ನಿಷ್ಟೆಯಿಂದ ಯಕ್ಷಗಾನ ಅದ್ಯಯನ ಗೈಯ ಬೇಕಿದೆ, ನಿರಂತರ ಅಧ್ಯಯನದಿಂದ ಯಕ್ಷಗಾನ  ಸಿದ್ಧಿಸಿ ಕೊಳ್ಳಬಹುದು ಎಂದು ಕಲಿಕಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

      ರಚನಾ ಸಾಂಸ್ಕøತಿಕ ಕಲಾ ಸಂಸ್ಥೆಯ ಅಧ್ಯಕ್ಷ ಹಾಗೂ ಖ್ಯಾತ ರಂಗನಟ ಹಾಗೂ ತುಳು ಸಿನೆಮಾ ನಟ ಅನಿಲ್ ರಾಜ್ ಉಪ್ಪಳ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಯಕ್ಷಗಾನ ಗುರು   ರಾಮ ಸಾಲ್ಯಾನ್ ಮಂಗಲ್ಪಾಡಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ನ್ಯಾಯವಾದಿ ಎಂ.ದಾಮೋದರ ಶೆಟ್ಟಿ , ಹವ್ಯಾಸಿ ಯಕ್ಷಗಾನ ಕಲಾವಿದ ರವೀಂದ್ರ ಉಚ್ಚಿಲ್, ರೋಹಿತ್ ಉಚ್ಚಿಲ್, ಸೇವಾರತ್ನ ಯು.ಎಂ.ಭಾಸ್ಕರ್ ಉಪ್ಪಳ, ಯಕ್ಷಮಿತ್ರ ದುಬೈ ಇದರ ಸದಸ್ಯರು ಕಲಾ ಪೋಷಕರೂ ಆದ ಕೃಷ್ಣ ಕುಮಾರ್ ಆರ್.ಐಲ್ ದುಬೈ, ಹೋಟೆಲ್ ಉದ್ಯಮಿ ಹಾಗೂ ರಚನಾ ಉಪ್ಪಳದ ಮಾಜಿ ಅಧ್ಯಕ್ಷ ಶ್ರೀಧರ ಯು, ರಚನಾ ಉಪ್ಪಳದ ಹಿರಿಯ ಸದಸ್ಯ ದಾಮೋದರ ಕೊಡ್ಡೆ, ಕತಾರ್ ಉದ್ಯೋಗಿ ಸದಾನಂದ ಶೆಟ್ಟಿ ಶಿವತೀರ್ಥಪದವು ಮುಳಿಂಜ, ಅತಿಥಿಗಳಾಗಿ ಭಾಗವಹಿಸಿದ್ದರು.

         ರಚನಾ ಉಪ್ಪಳದ ಸದಸ್ಯ ಕೆ.ಪಿ.ನಾಭ. ಐಲ ಕಾರ್ಯಕ್ರಮ ನಿರ್ವಹಿಸಿದರು. ಮಾ. ಚಿನ್ಮಯ್ ರಾವ್ ಚಿಗುರುಪಾದೆ ಪ್ರಾರ್ಥನೆ ಗೈದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries