ತ್ರಿಶೂರ್: ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಸಭಾ ಸಂಸದ, ಚಲನಚಿತ್ರ ನಟ ಸುರೇಶ್ ಗೋಪಿ ಸ್ಪರ್ಧಿಸುವುದಿಲ್ಲ ಎಂಬ ಸೂಚನೆಗಳಿವೆ. ಆದರೆ ಸುರೇಶ್ ಗೋಪಿ ರಾಜ್ಯದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಲಿದ್ದಾರೆ.
ತಿರುವನಂತಪುರ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸುರೇಶ್ ಗೋಪಿ ಅವರನ್ನು ಸ್ಟಾರ್ ಕ್ಯಾಂಪೇನರ್ ಆಗಿ ಕಣಕ್ಕಿಳಿಸಿದ ಬಿಜೆಪಿ, ವಿಧಾನಸಭಾ ಚುನಾವಣೆಯಲ್ಲೂ ಇದೇ ತಂತ್ರದ ಗುರಿ ಹೊಂದಿದೆ.
ಈ ಹಿಂದೆ, ತ್ರಿಶೂರ್ ನ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಿಂದ ಸುರೇಶ್ ಗೋಪಿ ಸ್ಪರ್ಧಿಸಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದಾಗ್ಯೂ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇಲ್ಲವೆಂದು ಇದೀಗ ತಿಳಿದುಬಂದಿದೆ. ಇದೇ ವೇಳೆ ಪಕ್ಷ ಒತ್ತಾಯಿಸಿದರೆ ತಿರುವನಂತಪುರಂನ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.