ಕೋಝಿಕ್ಕೋಡ್: ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಕೋಝಿಕ್ಕೋಡ್ ನಲ್ಲಿ ನಡೆದ ಪರೀಕ್ಷೆಯ ವೇಳೆ ಕೋವಿಡ್ ದೃಢಪಟ್ಟಿರುವುದಾಗಿ ತಿಳಿದುಬಂದಿದೆ.
ನಿರೀಕ್ಷಣೆಗಾಗಿ ಅವರನ್ನು ಕೋಝಿಕ್ಕೋಡ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಂದ್ರ ನಾಯಕರ ಭೇಟಿಯ ಬಳಿಕ ಸುರೇಂದ್ರನ್ ಗೆ ಬುಧವಾರ ದೆಹಲಿಯಿಂದ ಕೋಝಿಕ್ಕೋಡ್ ಗೆ ಮರಳಿದ್ದರು.
ಆದರೆ ಕೋವಿಡ್ ಈಗಾಗಲೇ ಕೇರಳದ ಪ್ರಮುಖ ರಾಜಕೀಯ ಪ್ರಮುಖ ವ್ಯಕ್ತಿಗಳಿಗೆ ಬಾಧಿಸಿದೆ. ಸಚಿವರಾದ ಥಾಮಸ್ ಐಸಾಕ್, ಇ.ಪಿ. ಜಯರಾಜನ್ ಮತ್ತು ವಿ.ಎಸ್.ಸುನಿಲ್ ಕುಮಾರ್ ಮೊದಲಾದವರಿಗೆ ಬಾಧಿಸಿ ಈಗ ಗುಣಮುಖರಾಗಿದ್ದಾರೆ.