ಕಾಸರಗೋಡು: ಉದುಮ ಶಾಸಕ ಕರ್ತವ್ಯದಲ್ಲಿದ್ದ ಪ್ರಿಸೈಡಿಂಗ್ ಅಧಿಕಾರಿಗೆ ಬೆದರಿಕೆ ಹಾಕಿದ ವಿಷಯದ ಬಗ್ಗೆ ದೂರು ನೀಡಲ್ಪಟ್ಟ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಪರಿಶೀಲಿಸಲಿದೆ. ಪ್ರಿಸೈಡಿಂಗ್ ಅಧಿಕಾರಿ ಕೆ.ಎಂ.ಶ್ರೀಕುಮಾರ್ ಅವರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಮತ್ತು ರಿಟನಿರ್ಂಗ್ ಅಧಿಕಾರಿಯಿಂದ ವರದಿ ಕೋರಲಿದ್ದಾರೆ.
ಆದರೆ ಪ್ರಿಸೈಡಿಂಗ್ ಅಧಿಕಾರಿಗೆ ಬೆದರಿಕೆ ಹಾಕಿಲ್ಲ ಎಂದು ಕೆ ಕುಂಞÂ ರಾಮನ್ ಪ್ರತಿಕ್ರಿಯಿಸಿರುವರು. ಎಡಪಕ್ಷದ ಅಭ್ಯರ್ಥಿ ಮತ್ತು ಶಾಸಕ ಕುಂಞÂ ರಾಮನ್ ಚುನಾವಣೆಯ ಸಮಯದಲ್ಲಿ ಕಾಲು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಶ್ರೀಕುಮಾರ್ ಆರೋಪಿಸಿದ್ದರು. ಮತದಾನದ ವೇಳೆ ಶಾಸಕರು ತಮ್ಮ ಗುರುತಿನ ಚೀಟಿ ಪರಿಶೀಲಿಸುವ ಬಗ್ಗೆ ಅಧಿಕಾರಿಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಶ್ರೀಕುಮಾರ್ ಅವರು ಫೇಸ್‍ಬುಕ್ ಮೂಲಕ ಮಾಹಿತಿ ನೀಡಿದ್ದರು.