ಬದಿಯಡ್ಕ: ಮುಂಡಿತ್ತಡ್ಕದ ಶ್ರೀಮಹಾವಿಷ್ಣು ಭಜನಾ ಸಂಘ ವಿಷ್ಣುನಗರ ಇದರ 31 ನೇ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸದಸ್ಯ ನಾರಾಯಣ ಮಣಿಯಾಣಿ ಅರಿಯಪ್ಪಾಡಿ ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಜನಾ ಮಂದಿರದ ಪ್ರಧಾನ ಅರ್ಚಕ ಭಾಸ್ಕರ ಬಿರಿಕುಂಜ, ಭಜನಾ ಮಂದಿರದ ಅಧ್ಯಕ್ಷ ಸೇಷಪ್ಪ ಬಂಗೇರ ಅವರು ಉಪಸ್ಥಿತರಿದ್ದರು. ವಾರ್ಷಿಕೋತ್ಸವದ ಪ್ರಯುಕ್ತ ನಿನ್ನೆಯಿಂದ ಜನವರಿ 27ರ ತನಕ ರಾತ್ರಿ 7.30ರಿಂದ 8.30ರ ತನಕ ವಿವಿಧ ಭಜನಾ ತಂಡಗಳಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.