ಉಪ್ಪಳ: ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.98 ಅಂಕ ಪಡೆದು ಉತ್ತೀರ್ಣಳಾದ ವಿಜಯ ಸುಕನ್ಯಾ ದಂಪತಿಗಳ ಸುಪುತ್ರಿ ಕುಮಾರಿ ಪ್ರೀತಿ ವಿಜಯ ಮಂಗಲ್ಪಾಡಿ ಯವರಿಗೆ ಸಿರಿಮುಡಿ ಸಂಘಟಕ ಸಮಿತಿಯ ವತಿಯಿಂದ ಅವರ ಸ್ವಗ್ರಹದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿರಿಮುಡಿ ಸಮಿತಿಯ ಅಧ್ಯಕ್ಷ ಹರೀಶ್ ಮಾಸ್ತರ್ ಅಂಗಡಿಪದವು, ಸಂಚಾಲಕ ತುಳಸಿದಾಸ್ ಮಂಜೇಶ್ವರ, ಚಂದ್ರಹಾಸ ಕತ್ತೆರಿಕೋಡಿ,ಸದಸ್ಯರಾದ ಉದಯ್ ಸೋಂಕಾಲ್, ಸುನೀಲ್ ಮಂಗಲ್ಪಾಡಿ, ಪಂಡಿತ್ ವಿಜಯ ಮಂಗಲ್ಪಾಡಿ, ಸುಕನ್ಯಾ, ಕುಮಾರಿ ವಿಶ್ಮಿತಾ ಮೊದಲಾದವರು ಉಪಸ್ಥಿತರಿದ್ದರು. ಸಿರಿಮುಡಿ ಸಂಘಟಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.