ತಿರುವನಂತಪುರ: ಕೆ.ಎಸ್.ಆರ್.ಟಿ.ಸಿಯಲ್ಲಿ ನೌಕರರು ಮೋಸ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿದ ಎಂ.ಡಿ ಬಿಜು ಪ್ರಭಾಕರ್ ವಿರುದ್ಧ ಕಾರ್ಮಿಕ ಸಂಘಗಳು ಭಾರೀ ಧ್ವನಿಯೆತ್ತಿವೆ. ಐಎನ್‍ಟಿ ತಿರುವನಂತಪುರನ ಎಂಡಿ ಕಚೇರಿಗೆ ಮೆರವಣಿಗೆ ನಡೆಸಿತು. ಸಿಐಟಿಯು ನಾಯಕರೂ ಸಂಸದರೂ ಆಗಿರುವ ಎಳಮರಂ ಕರೀಮ್ ಅವರು ಬಿಜು ಪ್ರಭಾಕರ್ ವಿರುದ್ಧ ಭಾರೀ ಪ್ರತಿಭಟನೆ ವ್ಯಕ್ತಪಡಿಸಿದರು.
ಕೆಎಸ್‍ಆರ್‍ಟಿಸಿ ಕೇಂದ್ರ ಕಚೇರಿಯನ್ನು ಬಾಡಿಗೆಗೆ ನೀಡಿದ್ದಕ್ಕಾಗಿ ಸಂಸ್ಥೆಗಳು ನೌಕರರನ್ನು ದೂಷಿಸಿದವು. ವ್ಯಾಪಕ ಭ್ರಷ್ಟಾಚಾರವಿದೆ ಎಂದು ನೌಕರರು ಪ್ರತಿಭಟನೆಯಲ್ಲಿ ತಿಳಿಸಿದರು. ವಂಚನೆ ನಡೆಸಿದವರನ್ನು ಗುರುತಿಸಿ ಅಂತಹ ಕಾರ್ಮಿಕರನ್ನು ವಜಾಗೊಳಿಸಲಾಗುವುದು ಎಂದು ಹೇಳುವವರು ಅವರ ನಿಷ್ಪಕ್ಷಪಾತ ನಡತೆಯನ್ನು ಮರು ಪರಿಶೀಲಿಸಬೇಕಾಗಿದೆ ಎಂದು ಒಕ್ಕೂಟದ ಮುಖಂಡರು ಹೇಳಿದರು. ಎಂಡಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೆರವಣಿಯಲ್ಲಿ ಒತ್ತಾಯಿಸಲಾಗಿದೆ. ಐಎನ್‍ಟಿಯುಸಿ ಸೋಮವಾರ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದೆ ಎಂದು ಸಂಘಟನೆ ಹೇಳಿದೆ.
ಕೆಲಸ ಮಾಡದೆ ಕಾರ್ಮಿಕರಿಗೆ ಸಂಬಳ ನೀಡಲಾಗುತ್ತದೆ ಎಂಬ ಎಂಡಿಯವರ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಎಳಮರಂ ಕರೀಮ್ ಹೇಳಿದರು. ನೌಕರರ ವಿರುದ್ಧದ ಎಂಡಿ ಹೇಳಿಕೆಯನ್ನು ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದರು.
ಅನೇಕ ಕೆಎಸ್‍ಆರ್‍ಟಿಸಿ ಡಿಪೆÇೀಗಳಲ್ಲಿ ಹೆಚ್ಚಿನ ಸಿಬ್ಬಂದಿ ಇದ್ದಾರೆ ಎಂದು ಎಂಡಿ ಶನಿವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಅನೇಕ ಖಾಯಂ ನೌಕರರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅನೇಕರು ಅವರವರ ಊರುಗಳಲ್ಲಿ ಶುಂಠಿ ಮತ್ತು ಅರಿಶಿನ ಕೃಷಿಯಲ್ಲಿ ನಿರತರಾಗಿದ್ದು ಉದ್ಯೋಗ ನಿರ್ವಹಿಸುತ್ತಿಲ್ಲ. ಜೊತೆಗೆ ಇಲಾಖೆಗೆ ಮಣ್ಣೆರಚಲು ಎಂ ಫಾರಂ ಅನುಸಾರ ಬೇರೆಡೆ ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಅನೇಕ ಡಿಪೆÇೀಗಳನ್ನು ಎಂ ಪ್ಯಾನೆಲ್‍ಗಳು ನಡೆಸುತ್ತವೆ. ಸಂಚಾರದ ದೂರವನ್ನು ಹೆಚ್ಚಿಸುವ ಮೂಲಕ ನೌಕರರು ಡೀಸೆಲ್ ಕದಿಯುವ ಕ್ರಮ ಮುಂದುವರಿಸಿದರೆ ಸಿಎನ್‍ಜಿ ಹೊಡೆತ ನೀಡಲಿದೆ ಎಂದು ಬಿಜು ಪ್ರಭಾಕರ್ ಹೇಳಿದ್ದಾರೆ.
1.5 ಕೋಟಿ ರೂ.ಗಳ ದೈನಂದಿನ ಸಂಗ್ರಹ ಕುಸಿತವಾದರೆ ಕೆಎಸ್‍ಆರ್‍ಟಿಸಿ ವ್ಯವಸ್ಥೆ ಕುಸಿದು ಬೀಳಲಿದೆ. ವೈಫಲ್ಯ ಸಂಭವಿಸಿದಾಗ, ನೌಕರರು ಖಜಾನೆಯಲ್ಲಿ ದಂಡ ಮೊತ್ತ ಪಾವತಿಸದೆ ಮೂರು ಅಥವಾ ನಾಲ್ಕು ದಿನಗಳ ಕಾಲ ತಲೆಮರೆಸಿದರು. ಅವರು ಸಿಕ್ಕಿಬಿದ್ದು ಕಾನೂನು ವಿಧೇಯರಾಗಿ ಅಮಾನತುಗೊಂಡಿದ್ದು, ಅಂತಹ ನೌಕರ ಇದೀಗ ಕೊಲ್ಲಂನಲ್ಲಿ ಅತಿದೊಡ್ಡ ರಿಯಲ್ ಎಸ್ಟೇಟ್ ವ್ಯಾಪಾರಿ ಎಂದು ಬಿಜು ಪ್ರಭಾಕರ್ ಹೇಳಿದ್ದಾರೆ.
ಕ್ಷುಲ್ಲಕ ವಿಷಯಗಳ ಸಂದರ್ಭದಲ್ಲಿ, ಪ್ರಯಾಣಿಕ ಟಿಕೆಟ್ ತೆಗೆದುಕೊಂಡಿಲ್ಲ ಎಂದು ಹೇಳಿದ್ದಕ್ಕಾಗಿ ಈವರೆಗೆ ಯಾರನ್ನೂ ಅಮಾನತುಗೊಳಿಸಿಲ್ಲ. ಆದರೆ ಇದು ದೊಡ್ಡ ಮಟ್ಟಿನ ವಂಚನೆಯಾಗಿ ದೈನಂದಿನ ವ್ಯವಸ್ಥೆಯಾದರೆ ಸಾರಿಗೆ ಇಲಾಖೆ ಅಧಃಪತನಕ್ಕೊಳಗಾಗುವುದು. ಅನುಭವಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದನ್ನು ಸರಿಯಾಗಿ ಅರ್ಥೈಸಿ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು.
ಕೆಎಸ್‍ಆರ್‍ಟಿಸಿಯಲ್ಲಿ ಹೆಚ್ಚುವರಿ 7090 ಉದ್ಯೋಗಿಗಳಿದ್ದಾರೆ. ಕಾರ್ಯಾಗಾರಗಳ ಸಂಖ್ಯೆ ಕಡಿಮೆಯಾಗಿದೆ. ಕೆಲವು ವಿಭಾಗದ ಸಿಬ್ಬಂದಿಗಳು ದೂರದ ಖಾಸಗಿ ಬಸ್‍ಗಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವರು.